Bysuddi9

Oct 29, 2014

ಬಂಟ್ವಾಳ: ಬ್ರೇಕ್ಥ್ರೂ ಸಂಸ್ಥೆಯ ವತಿಯಿಂದ ಮೇರಮಜಲು ಗ್ರಾಮಪಂಚಾಯತ್ನ ಸಹಯೋಗದೊಂದಿಗೆ ಮಹಿಳಾ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯ ತಡೆಯುವ ಬಗ್ಗೆ ಪಂಚಾಯತ್ ಸದಸ್ಯರಿಗೆ ವಿಚಾರ ವಿನಿಮಯ ಕಾರ್ಯಕ್ರಮ ಮಂಗಳವಾರ ಮೇರಮಜಲು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ವೃಂದಾ ಪೂಜಾರಿ ಅಧ್ಯಕ್ಷೆ ವಹಿಸಿ ಮಾತನಾಡಿ ಯಾವುದೇ ರೀತಿಯ ದೌರ್ಜನ್ಯ ಆದರೂ ಆ ಬಗ್ಗೆ ಧ್ವನಿ ಎತ್ತಿ ಮಾತನಾಡಬೇಕು ಎಂದರು. ಇಂದು ಜನರುಇ ಮಯರ್ಾದೆಗೆ ಅಂಜಿ ಎಷ್ಟೋ ಲೈಂಗಿಕ ದೌರ್ಜನ್ಯಗಳನಗಳನ್ನು ಹೇಳದೆ ಮನಸ್ಸಿನಲ್ಲೇ ನೋವು ಅನುಭವಿಸುತ್ತಾ ಕಾಲ ಕಳೆಯುತ್ತಾರೆ ಇದು ಸರಿಯಲ್ಲ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಂಚಾಯತ್ ಉಪಾಧ್ಯಕ್ಷ ಕಾಂತಪ್ಪ ಶೆಟ್ಟಿ ಮಾತನಾಡಿ ಅತ್ಯಾಚಾರದಂತಹ ಘೋರ ಅಪರಾದಗಳು ನಡೆದಾಗ ಸಕರ್ಾರ ತನ್ನ ಕಾನೂನನ್ನು ಬಳಸಿ ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ನೀಡಿದ್ದಲ್ಲಿ ಇತರರಿಗೆ ಅದು ಪಾಠವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಲಾವಿದೆ ಸುನಿಲಾ ಜಾರಂದಗುಡ್ಡೆ ನೀಲಿ ರಿಬ್ಬನ್ ಎನ್ನುವ ಏಕವ್ಯಕ್ತಿ ನಾಟಕ ನಡೆಸಿಕೊಟ್ಟರು. ಈ ನಾಟಕವನ್ನು ವಿಷಯವಾಗಿಟ್ಟುಕೊಮಡು ಲೈಂಗಿಕ ದೌರ್ಜನ್ಯದ ಬಗ್ಗೆ ಸಂವಾದ ನಡೆಯಿತು. ಕಾರ್ಯಕ್ರಮವನ್ನು ಬ್ರೇಕ್ಥ್ರೂ ಸಂಸ್ಥೆಯ ತರಬೇತುದಾರರಾದ ಮಂಜುಳಾ ಸುನೀಲ್ ಮತ್ತು ಭರತ್ ಎಸ್. ಕಕರ್ೆರಾ ನಡೆಸಿಕೊಟ್ಟರು. ಮಹಿಳಾ ದೌಜ್ಣ್ಯ ಮತ್ತು ಪೋಕ್ಸೊ ಕಾಯ್ದೆಯನ್ನು ಗ್ರಾಮದಲ್ಲಿ ಪ್ರಚಾರ ಮಾಡುವ ನಿಟ್ಟಿನಲ್ಲಿ ಕೆಲವೊಂದು ಪ್ರದೇಶದಲ್ಲಿ ಮಾಹಿತಿ ಬ್ಯಾನರ್ಗಳನ್ನು ಅಳವಡಿಸಲು ಸಭೆಯಲ್ಲಿ ತೀಮರ್ಾನಿಸಲಾಯಿತು. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರಶ್ಮಿ ಆರ್.ಕಿಲ್ಲೆ ಸ್ವಾಗತಿಸಿ, ಪಂಚಾಯತ್ ಸದಸ್ಯೆ ಶಶಿಕಲಾ ವಂದಿಸಿದರು.

By suddi9

Leave a Reply

Your email address will not be published. Required fields are marked *