ಸುದ್ದಿ9ಗುರುಪುರ:ಗುರುಪುರ ಜಂಗಮ ಮಠದ ವಠಾರದಲ್ಲಿ ಅ.26 ಬಾನುವಾರ ಸಾಯಂಕಾಲ 4 ಘಂಟೆಗೆ ಮಾತೃ ಮಂದಿರ ಹಾಗೂ ದುರ್ಗಾವಾಹಿನಿ ಗುರುಪುರ ಶಾ:ಖೆಯನ್ನು ಗರುಪುರ ಜಂಗಮ ಮಠದ ಶ್ರೀಶ್ರೀಶ್ರೀ ರುದ್ರ ಮುನಿ ಸ್ವಾಮಿ ಇವರ ಆಶರ್ೀವಾದಗಳೊಂದಿಗೆ ಗುರುಪುರ ವಜ್ರದೇಹಿ ಮಠದ ಪರಮ ಪೂಜ್ಯ ಶ್ರೀಶ್ರೀಶ್ರೀ ರಾಜಶೇಖಾರನಂದ ಸ್ವಾಮೀಜಿ ಇವರ ದಿವ್ಯ ಹಸ್ತಗಳಿಂದ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಇದರ ಘನ ಅಧ್ಯಕ್ಷತೆಯನ್ನು ರಾಷ್ರ್ಟಿಯ ಸೇವಿಕಾ ಸಮಿತಿ ದಕ್ಷೀಣಾ ಪ್ರಾಂತ: ಸಂಪರ್ಕ ಪಮು:ಖ್ ಡಾ.ಕಮಲಾ ಪ್ರಭಾಕರ್ ಭಟ್ ಇವರು ವಹಿಸಿದರು, ಮುಖ್ಯ ಅತಿಥಿಗಳಾಗಿ ಗುರುಪುರ ವಿಶ್ವ ಹಿಂದು ಪರಿಷತ್ ಪ್ರಖಂಡ ಅಧ್ಯಕ್ಷರು ವಿಷ್ಣುಕಾಮತ್ ಹಾಗೂ ಭಜರಂಗದಳ ಜಿಲ್ಲ ಸಂಚಾಲಕರು ಬುಜಂಗ ಕಲಾಲ್, ಗುರುಪುರ ಭಜರಂಗದಳದ ಪ್ರಖಂಡ ಸಂಚಾಲಕರು ಕೃಷ್ಣ ಕಜೆಪದವು, ಮಂಗಳೂರು ಉತ್ತರ ಮಹಿಳಾ ಮೊಚರ್ಾದ ಅಧ್ಯಕ್ಷರು ಪೂಜಾ ಪೈ , ಮತ್ತು ಜಲ್ಲಾ ಮಾತೃ ಮಂದಿರದ ಸಂಚಾಲಕರು ಸುರೇಖಾ ಮತ್ತಿತ್ತರರು ಉಪಸ್ಥಿತರಿದ್ದರು. ರಶ್ಮಿ ಪ್ರಾರ್ಥನೆಯೊಂದಿಗೆ, ಶೈಲಜ ಸ್ವಾಗತಿಸಿ, ಗೀತಾ ಆಚಾರ್ಯ ನಿರೂಪಿಸಿ, ಶೋಭ ದನ್ಯವಾದವಿತ್ತರು. ಕಾರ್ಯಕ್ರಮದ ನೇತೃತ್ವವನ್ನು ಹರೀಶ್ ಮೂಡು ಶೆಡ್ಡೆ ವಹಿಸಿದ್ದರು.


