ಪೊಳಲಿ : ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.29 ಭಾನುವಾರ ವಿವಿಧ ಭಜನಾ ಮಂಡಳಿ ಯವರಿಂದ ಭಜನಾ ಸಂಕೀರ್ತನೆ ನಡೆಯಿತು.02ಆ.30 ಸೋಮವಾರ ವಿಷ್ಣು ಸಹಸ್ರನಾಮದೊಂದಿಗೆ ಭಕ್ತಾದಿಗಳು ಶ್ರೀ ಕ್ರಷ್ಣನಿಗೆ  ತುಳಸಿ ಅರ್ಚನೆ ಮಾಡಿದರು.  ಸ್ವಾಮಿ ವಿವೇಕಚೈತನ್ಯಾನಂದ  ಅವರು ನಂತರ ಶ್ರೀ ಕ್ರಷ್ಣನಿಗೆ ಅಭಿಷೇಕ ಮಾಡಿ ಉಯ್ಯಾಲೆಯಲ್ಲಿ ತೂಗಿ ಜೋಗುಳ ಹಾಡುವುದು ಆಶ್ರಮದ ಸಂಪ್ರದಾಯ.  ಆಶ್ರಮದ ಭಕ್ತಾದಿಗಳು   ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.01ಈ ಸಂಧರ್ಭದಲ್ಲಿ ಸ್ವಾಮೀಜಿಯವರು ಮಾತನಾಡಿ ಇಂದು ಜಗತ್ತಿನಾದ್ಯಂತ ಭಗವಾನ್ ಶ್ರೀಕೃಷ್ಣನ ಜನ್ಮದಿನವನ್ನು ಶ್ರೀಕೃಷ್ಣ ಜನ್ಮಾಷ್ಠಮಿಯೆಂದು ಆಚರಿಸುತ್ತಾರೆ. ಭಗವಾನ್ ಶ್ರೀಕೃಷ್ಣ ಸುಮಾರು ೫೫೦೦ ವರ್ಷಗಳ ಹಿಂದೆ ಭರತಖಂಡದಲ್ಲಿ ಜನ್ಮತಾಳಿ ಲೋಕದ ಕಲ್ಯಾಣಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಂದೇಶಗಳನ್ನು ನೀಡಿದ್ದಾನೆ. ಅದಕ್ಕಾಗಿ ಎಲ್ಲ ಕಡೆ ಜನ್ಮಾಷ್ಠಮಿಯನ್ನು ಆಚರಿಸುತ್ತಾರೆ ಎಂದರು.04

IMG_8510

 

 

 

By Suddi9

Leave a Reply

Your email address will not be published. Required fields are marked *