ಮುಂಬಯಿ : ಸಹೋದರ ಮತ್ತು ಸಹೋದರಿಯರ ಪ್ರೀತಿಯನ್ನು ಪರಸ್ಪರ ಹಂಚಿ ಕೊಳ್ಳುವ. ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ಹಬ್ಬವಾಗಿದೆ. ಪರಸ್ಪರ ಧರ್ಮ ಪ್ರೇಮ ವಾತ್ಸಲ್ಯ ತೋರಿಸುವ ಇದು ಭಾರತೀಯರ ಸಂತೋಷದ ಅಭಿವ್ಯಕ್ತಿಯಾಗಿದೆ. ರಕ್ಷಾಬಂಧನ ಭಾರತೀಯರ ಸಂಬಂಧದ ಸಂಕೇತವೂ ಹೌದು ಎಂದು ೧೦೮ ದಿವ್ಯ ಸಾಗರ ಮುನಿ ವರ್ಯರು ತಿಳಿಸಿದರು.Jaina Mutt Raksha Bandhana 4ಸೌರ ಶರದ್ ಋತು ಆರಂಭದ ಶುಭಾವಸರದ ಶ್ರವಣ ಹುಣ್ಣಿಮೆ ಮತ್ತು ರಕ್ಷಾ ಬಂಧನದ ಶುಭಾವಸರದ ಇಂದು ಭಾನುವಾರ ಬೆಳಿಗ್ಗೆ ಶ್ರೀ ಜೈನ ಮಠದಲ್ಲಿ ನೆರವೇರಿಸಲಾದ ನೂಲ ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಗರ ಮುನಿ ವರ್ಯರು ಆಶೀರ್ವಾದಗೈದು ತಿಳಿಸಿದರು.

Jaina Mutt Raksha Bandhana 3ಶ್ರೀ ದಿಗಂಬರ ಜೈನ ಮಠ ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಅವರ ಶುಭಾನುಗ್ರಹ, ಮಾರ್ಗದರ್ಶನದಲಿ ಸರಳವಾದ ಕಾರ್ಯಕ್ರಮ ನಡೆಸಲ್ಪಟ್ಟಿತು.
Jaina Mutt Raksha Bandhana 5ಜೈನ ಧರ್ಮದಲ್ಲಿಯೂ ರಕ್ಷಾಬಂಧನವನ್ನು ಆಚರಿಸುವುದರ ಹಿಂದೆ ವಿಭಿನ್ನ ನಂಬಿಕೆ ಇದೆ. ರಕ್ಷಾಬಂಧನದ ಕಥೆಯು ಜೈನ ಸಮುದಾಯದ ನಂಬಿಕೆಗಳಲ್ಲಿ ಸ್ವಲ್ಪ ಭಿನ್ನವಾಗಿದೆ. ಈ ಕಥೆಯು ೭೦೦ ಮುನಿಗಳನ್ನು ರಕ್ಷಿಸುವ ಕಥೆ ಆಧರಿಸಿದೆ. ಈ ಕಥೆಯೇ ರಕ್ಷಾಬಂಧನದ ಹಬ್ಬದ ಆಧಾರವಾಗಿದೆ. ಈ ದಿನ ೨೨.೮.೨೧ ಹಿಂದೆ ಇದೆ ಸಮಯ ಶ್ರಾವಣ ನಕ್ಷತ್ರ ದ ಮಾಸದ ಹುಣ್ಣಿಮೆಯ ದಿನವಾಗಿತ್ತು. ಈ ದಿನ ಅಕಂಪನಾ ಮುನಿವರ್ಯ ಹಾಗೂ ಸಂಘದ ೭೦೦ ಮುನಿಗಳನ್ನು ರಕ್ಷಿಸಲಾಯಿತು. ಈ ದಿನವನ್ನು ನೆನಪಿಟ್ಟು ಕೊಳ್ಳಲು, ಅಂದಿನಿಂದ ಇದನ್ನು ರಕ್ಷಾಬಂಧನದ ಹಬ್ಬವೆಂದು ಪರಿಗಣಿಸಲಾಗಿದೆ. ಇದರ ನಂತರ ವಿಷ್ಣು ಕುಮಾರ ಮುನಿ ಗುರುಗಳ ಬಳಿಗೆ ಹೋಗಿ ತನ್ನ ದೋಷಗಳನ್ನು ಹೇಳಿ ಘೋರ ತಪಸ್ಸು ಮಾಡಿದರು ಇಂದಿಗೂ, ಈ ಪವಿತ್ರ ದಿನ ಜೈನರ ಮನೆಗಳಲ್ಲಿ ರತ್ನತ್ರಯ ಸೂತ್ರ ಜನಿವಾರ ಧಾರಣೆ ದಿನವಾಗಿ ಆಚರಣೆ ಮಾಡಲಾಗುತ್ತದೆ ಮತ್ತು ವಿಷ್ಣುಕುಮಾರ ಮುನಿಯ ಪೂಜೆ ಮತ್ತು ಕಥೆಯ ನಂತರ ರಕ್ಷಾಬಂಧನದ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ತಿಳಿಸಿದರು.Jaina Mutt Raksha Bandhana 6ಪ್ರಸ್ತುತ ಕರೋನಾ ಸೋಂಕಿನಿAದಾಗಿ, ಪ್ರತಿಯೊಬ್ಬ ಸಹೋದರ ಸಹೋದರಿಯರು ಯಾವುದೇ ರಾಖಿ, ಉಡುಗೊರೆಗಳನ್ನು ಕಳುಹಿಸಬೇಡಿ ಅಥವಾ ಸಹೋದರ ಸಹೋದರಿಯರನ್ನು ಭೇಟಿ ಮಾಡಲು ಪ್ರಯತ್ನಿಸಬೇಡಿ. ಕೋರೋನಾ ಮಹಾ ಮಾರಿ ಜಗತ್ತಿನಲ್ಲಿ ಸಂಪೂರ್ಣ ಮಾಯವಾಗುವ ವರೆಗೂ ಎಚ್ಚರ ಅತ್ಯಗತ್ಯ. ಸಾಕಷ್ಟು ಅಂತರ ಕಾಯ್ದು ಕೊಂಡು ರಕ್ಷಾ ಬಂಧನ ಪರ್ವ ಆಚರಿಸೋಣ. ಪರಿವರ್ತನೆಯ ಅವಧಿಯಲ್ಲಿ ನಿಮ್ಮ ಮತ್ತು ಇತರರ ಸುರಕ್ಷತೆ ಅತ್ಯಗತ್ಯ.ಅಂತರ ಕಾಯ್ದು ಪರ್ವ ಆಚರಣೆ ಮಾಡಿ ಎಂದು ಮಂಗಲಾಚರಣೆಯಲ್ಲಿ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯರು ಹಿತನುಡಿಗಳನ್ನಾಡಿದರು.Jaina Mutt Raksha Bandhana 1ಬಕ್ಕಾರು ತಿಲಕ ಪ್ರಸಾದ್, ಪವನ್ ಜೈನ್, ಶ್ರೀಧರ ಸೇನ ಜೈನ್, ಕೆ.ಶ್ರೀಪಾಲ್, ಎಸ್.ಸುಧಾಕರ್, ಪಣಿರಾಜ್ ಹಾಗೂ ಶ್ರೀ ಮಠದ ವಿದ್ಯಾಥಿüðಗಳು ಉಪಸ್ಥಿತರಿದ್ದು ರತ್ನತ್ರಯ ಸೂತ್ರ ಅಭಿಷೇಕ, ಹವನ ಬಳಿಕ ನಮೋಕಾರ ಮಂತ್ರ ಪಠಿಸಿ ಧಾರಣೆ ಮಾಡಿದರು.

By Suddi9

Leave a Reply

Your email address will not be published. Required fields are marked *