ಸುದ್ದಿ9ಬಂಟ್ವಾಳ: ಬಿ.ಸಿ.ರೊಡಿನ ಸರ್ವಿಸ್ ರಸ್ತೆಯಲ್ಲಿ ವಾಹನ ಸವಾರಿ ಮಾಡುವ ಸವಾರರರು ಹೆದ್ದಾರಿ ಇಲಾಖೆಯಲ್ಲಿ ಪ್ರತ್ಯೇಕ ಪರವಾನಿಗೆ ಮತ್ತು ವಾಹನ ತರಬೇತಿ ಪಡೆದು ಬರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಯಾಕೆಂದರೆ ವಾಹನ ಚಾಲಕರು ಚೂರು ಎಡವಿದರೆ ಅಪಾಯ ತಪ್ಪಿದ್ದಲ್ಲ. ಮೃತ್ಯ ಕೂಪದಂತಿರುವ ಹೊಂಡಗಳು ಬಾಯ್ತೆರದು ನಿಂತು ಯಾವಾಗ ಬೇಕಾದರೂ ಬಲಿ ಪಡೆದುಕೊಳ್ಳುವಂತಿದೆ. ಅದರೂ ಕೂಡಾ ಸಂಬಂದಪಟ್ಟ ಇಲಾಖೆ ಮಾತ್ರ ಸುಮ್ಮನಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿದೆ.
ಎರಡು ವರ್ಷಗಳ ಹಿಂದೆಯಷ್ಟೇ ನಿಮರ್ಾಣಗೊಂಡ ಬಿ.ಸಿ.ರೋಡಿನ ಸರ್ವಿಸ್ ರಸ್ತೆ ತನ್ನ ಅಸಲಿ ಮುಖವನ್ನು ಅನಾವರಣಗೊಳಿಸಿದೆ. ಕಳಪೆ ಕಾಮಾಗಾರಿಯಿಂದಾಗಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ವಾಹನ ಸವಾರರನ್ನು ಸ್ವಾಗತಿಕೊಳ್ಳುತ್ತಿವೆ. ಘನ ವಾಹನಗಳ ಚಕ್ರಗಳು ಹೊಂಡಕ್ಕೆ ಬಿದ್ದು ಮೇಲೆಳೆವ ಸಂದರ್ಭ ಕೆಸರು ನೀರು ಪ್ರಯಾಣಿಕರ ಮೇಲೆ ಸಿಂಚನವಾಗುತ್ತಿದ್ದರೆ, ಯಾವಾಗ ವಾಹನಗಳು ಅಡ್ಡ ಬೀಳುತ್ತದೋ ಎನ್ನುವ ಭಯ ಪ್ರಯಾಣಿಕರಿಗೆ. ಬಸ್ಸುಗಳ್ಲ್ಲಿ ಪ್ರಯಾನಿಸುವವವರು ತನ್ನ ಜೀವದ ಭಯದಲ್ಲಿ ಕಣ್ಣು ಮುಚ್ಚಿ ಕುಳಿತುಕೊಂಡು ಇರುವವರೇ ಜಾಸ್ತಿಯಾಗಿದೆ
ಈ ಹೊಂಡಗಳು ದಿನದಿಂದ ದಿನಕ್ಕೆ ತಮ್ಮ ಗಾತ್ರವನ್ನು ಹಿಗ್ಗಿಸಿಕೊಂಡು ಕೆರೆ, ಬಾವಿಯಂತೆ ತನ್ನ ಆಳವನ್ನು ವಿಸ್ತರಿಸಿಕೊಳ್ಳುತ್ತಿವೆ. ಮಳೆ ನೀರು ನಿಂತರೇ ಸಾಕು ಈ ಹೊಂಡಗಳಿಂದ ವಾಹನ ಸವಾರರಿಗೆ ಎದುರಾಗುವ ಅಪಾಯವನ್ನು ಊಹಿಸಲು ಸಾಧ್ಯವಿಲ್ಲ. ಈಗಾಗಲೇ ಹಲವು ಮಂದಿ ವಾಹನ ಸಹಿತ ಹೊಂಡದೊಳಗೆ ಬಿದ್ದು ಗಾಯಗಳನ್ನು ಮಾಡಿಕೊಂಡ ಉದಾಹರಣೆಗಳು ಹಲವು ಇವೆ. ಆದರೂ ಹೆದ್ದಾರಿಯ ನಿರ್ವಹಣೆಯ ಜವಬ್ದಾರಿ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದ್ಯಾವುದರ ಅರಿವು ಇಲ್ಲದೆ ಕಂಬಳಿ ಹೊದ್ದು ಮಲಗಿದೆ
ಮಂಗಳೂರು- ಬೆಂಗಳೂರು ಸಂಪಕರ್ಿಸುವ ರಾಷ್ಟ್ರೀಯ ಹೆದ್ದಾರಿ 75 ಮೃತ್ಯು ಕೂಪವಾಗಿ ಪರಿಣಮಿಸಿದೆ. ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಹೊಂಡಗಳು ತುಂಬಿ ಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿನ ಪ್ರಯಾಣ ಅಪಾಯಕಾರಿಯಾಗಿದೆ.
ಬಿ.ಸಿ.ರೋಡಿನ ಕೈಕಂಬದಿಂದ ಮೆಲ್ಕಾರ್ವರಗೆ ಕೇವಲ 3 ಕಿ.ಮೀ ಉದ್ದದ್ದ ರಸ್ತೆಯಲ್ಲಿ ಸಂಚರಿಸಿದರೆ ಸಾಕು ಬೃಹತ್ ಹೊಂಡಗಳ ದರ್ಶನವಾಗುತ್ತದೆ. ವಾಹನಗಳು ಸಂಚರಿಸುವ ವೇಳೆ ಪ್ರತಿ ಹೊಂಡವನ್ನು ಪ್ರದಕ್ಷಿಣೆ ಹಾಕಿಯೇ ಮುಂದೆ ಸಾಗ ಬೇಕಾದ ಅನಿವಾರ್ಯತೆ ಒದಗಿದೆ. . ಮೆಲ್ಕಾರ್ ಹಾಗೂ ಬಿ.ಸಿ.ರೋಡಿನ ಕೆಲವು ಭಾಗಗಳಲ್ಲಿ ಸಾರ್ವಜನಿಕರು, ವಾಹನ ಚಾಲಕರು ಸೇರಿಕೊಂಡು ಕಲ್ಲು ಹಾಕಿ ಹೊಂಡ ಮುಚ್ಚುವ ಪ್ರಯತ್ನ ನಡೆಸಿದ್ದಾರೆ.





