ಸುದ್ದಿ9ಬಂಟ್ವಾಳ:ತಾಲ್ಲೂಕಿನ ಬಿ.ಕಸ್ಬಾ ಗ್ರಾಮದ ಸರಳಪಾದೆ ನಿವಾಸಿ ಮಹೇಶ (27) ಎಂಬವರು ಶನಿವಾರ ಬೆಳಿಗ್ಗೆ ಮನೆಯಿಂದ ಹೊರಗೆ ಹೋದವು ಭಾನುವಾರ ತನಕವೂ ಮರಳಿ ಮನೆಗೆ ಬಂದಿಲ್ಲ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೊಂದೆಡೆ ಇದೇ ಗ್ರಾಮದ ಹೊಸ್ಮಾರು ನಿವಾಸಿ ನವ್ಯಾ (22) ಎಂಬಾಕೆ ಕೂಡಾ ಶನಿವಾರ ಬೆಳಿಗ್ಗೆ ಎಂದಿನಂತೆ ಬಂಟ್ವಾಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ಕೆಲಸಕ್ಕಾಗಿ ಹೋಗಿ ಬಳಿಕ ಮರಳಿ ಮನೆಗೆ ಬಂದಿಲ್ಲ ಎಂದು ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
