ಸುದ್ದಿ9ಮೂಡುಬಿದರೆ : ಅಮೇರಿಕಾದಲ್ಲಿ ಇತ್ತೀಚಿಗೆ ನಡೆದ ವಿಶ್ವ ಪವರ್ ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ವಿಜೇತರಾದ ವಿಜಯ ಕಾಂಚನ್ ಬೈಕಂಪಾಡಿ ಮತ್ತು ಚಿನ್ನದ ಪದಕ ವಿಜೇತರಾದ ಅಕ್ಷತಾ ಪೂಜಾರಿ ಅವರನ್ನು ಯುವಜನಸೇವೆ ಮತ್ತು ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಶನಿವಾರ ತಮ್ಮ ನಿವಾಸದಲ್ಲಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು ಪವರ್ ಲಿಫ್ಟಿಂಗ್ನಲ್ಲಿ ಪದಕ ಗಳಿಸುವ ಮೂಲಕ ರಾಜ್ಯಕ್ಕೆ ಕಿರ್ತಿ ತಂದಿದ್ದಾರೆ. ಈ ಕ್ರೀಡಾ ಪಟುಗಳ ಪ್ರಯಾಣ ವೆಚ್ಚವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಅಕ್ಷತಾ ಪೂಜಾರಿಯವರಿಗೆ ಕ್ರೀಡಾ ಕೋಟಾದಲ್ಲಿ ರೈಲ್ವೇಯಲ್ಲಿ ಉದ್ಯೋಗ ದೊರಕಿಸಿ ಕೊಡಲು ರೈಲ್ವೇ ಸಚಿವರನ್ನು ಕೋರಲಾಗುವುದು. ಇಂತಹ ಕ್ರೀಡಾ ಪ್ರತಿಭೆಗಳನ್ನು ಕೇಂದ್ರ ಸರ್ಕಾರವು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

