ಮೂಡುಬಿದರೆ : ಶ್ರೀ ದಿಗಂಬರ ಜೈನ ಮಂದಿರ ಟ್ರಸ್ಟ್ ಕೊಣಾಜೆ ಇದರ ದಿಗಂಬರ ಜೈನ ವಧೂ-ವರರ ವಿವಾಹ ವೇದಿಕೆ ವತಿಯಿಂದ ಮೂಡುಬಿದರೆಯಲ್ಲಿ ನ.16ರಂದು ವಧೂ ವರರ-ಪರಿಚಯ ಸಮ್ಮೇಳನ ನಡೆಯಲಿದೆ ಎಂದು ಟ್ರಸ್ಟ್ನ ಸಂಚಾಲಕ ಪದ್ಮರಾಜ ಜೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜೈನ ಸಮುದಾಯದಲ್ಲಿ ಉದ್ಯೋಗ ನಿಮಿತ್ತವಾಗಿ ವಲಸೆ ಹೋಗುವ ಪ್ರವೃತಿ ಹೆಚ್ಚಾಗರುವುದರಿಂದ ಮತ್ತು ಸಂಪರ್ಕ ಹಾಗೂ ಮಾಹಿತಿಯ ಕೊರತೆಯಿಂದಾಗಿ ಅಡ್ಡಿಯುಂಟಾಗುತ್ತಿದೆ. ಅಲ್ಲದೆ ವಿವಾಹ ಯೋಗ್ಯ ವಧೂ-ವರರ ಸಂಬಂಧ ಕುದುರಿಸುವ ಕಾರ್ಯ ಜಟಿಲವಾಗುತ್ತಿದ್ದು ಅದಕ್ಕಾಗಿಯೇ ಅವಿಭಜಿತ ಜಿಲ್ಲೆಯಲ್ಲಿ ಸೌಲಭ್ಯ ಕೊರತೆಯನ್ನು ಮನಗಂಡು ಮೂಡುಬಿದರೆಯಲ್ಲಿ ದಿಗಂಬರ ಜೈನ ವಧೂ-ವರರ ವಿವಾಹ ವೇದಿಕೆಯನ್ನು ಆರಂಭಿಸಲು ನಿರ್ಧರಿಸುವುದಾಗಿ ತಿಳಿಸಿದರು.

Digambara Jain Pressmeet about Marriage

ವೇದಿಕೆಯ ಮೂಲಕ ದಿಗಂಬರ ಜೈನ ಧಮರ್ಿಯರಲ್ಲಿರುವ ವಿವಾಹ ಯೋಗ್ಯ ವಧೂ ವರರಿಗೆ ಪರಸ್ಪರರ ಬಗ್ಗೆ ತಿಳಿದುಕೊಳ್ಳುವ, ಪರಿಚಯಿಸುವ ಕಾರ್ಯವನ್ನು ಮಾಡಲಿದೆ. ವೇದಿಕೆಯಲ್ಲಿ ತಮ್ಮ ಹೆಸರುಗಳನ್ನು ನೋದಾಯಿಸಿಕೊಳ್ಳಲು ಆಸಕ್ತಿಯಳ್ಳವರಿಗಾಗಿ ನಿಗದಿತ ಅಜರ್ಿ ನಮೂನೆಯನ್ನು ಸಿದ್ಧಪಡಿಸಲಾಗಿದ್ದು, ಇದರಲ್ಲಿ ವಿವಾಹ ಯೋಗ್ಯ ವಧೂ-ವರರ ಭಾವಚಿತ್ರ, ಜಾತಕ,ವಿದ್ಯಾರ್ಹತೆ, ಉದ್ಯೋಗ,ಎತ್ತರ,ಬಣ್ಣ ರಕ್ತದ ಗುಂಪು, ಅವರ ನಿರೀಕ್ಷೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ನೀಡುವುದು ಎಂದು ತಿಳಿಸಿದರು.
ಪ್ರದೀಪ್ ಜೈನ್ ಮತ್ತು ನಾಗವರ್ಮ ಜೈನ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *