Published On: Wed, Jul 21st, 2021

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಕೈಕಂಬ : ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಗುರುಪುರ ವಲಯ ಸಮಿತಿ ಮಂಗಳವಾರ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿತು. ಸಂಜೆ ಹೊತ್ತಿಗೆ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಕಿಡಿ ಕಾರುತ್ತ, ‘ಚುನಾವಣೆ ವೇಳೆ ಕಪ್ಪು ಹಣ, ಬೆಲೆ ಏರಿಕೆ ನಿಯಂತ್ರಣ, ಬಡವರ ಕಾಳಜಿಯಂತಹ ಹತ್ತು ಹಲವಾರು ಆಶ್ವಾಸನೆ ನೀಡಿರುವ ಬಿಜೆಪಿಗರು ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಮರೆದು ಬಡವರು, ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.gur-july-20-cpim-1ಸ್ವರ್ಗವನ್ನೇ ಧರೆಗಿಳಿಸುವಂತಹ ಬಣ್ಣದ ಮಾತಿಂದ ಮತದಾರರ ಓಲೈಕೆ ಮಾಡಿದ ಪ್ರಧಾನಿ ಮೋದಿಯವರ ‘ಅಚ್ಚೇ ದಿನ್’ ಎಲ್ಲಿದೆ ಮತ್ತು ಯಾರಿಗಿದೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಅಗತ್ಯ ವಸ್ತುಗಳು ಬೆಲೆ ಗಗನಕ್ಕೇರುವಂತೆ ಮಾಡಿರುವುದು ಮೋದಿಗಿರುವ ಬಡಜನರ ಕಾಳಜಿಯೇ ಎಂದು ಪ್ರಶ್ನಿಸಿದ್ದಾರೆ.gur-july-20-cpim-2ಸಿಪಿಐಎಂ ಗುರುಪುರ ವಲಯ ಸಮಿತಿ ಕಾಯದರ್ಶಿ ಸದಾಶಿವ ದಾಸ್ ಮಾತನಾಡಿ, ಮೋದಿ ನಿರ್ದೇಶನದಂತೆ ಬಿಜೆಪಿ ಸಾಧನೆ ಪಟ್ಟಿ ಜನರ ಬಳಿ ಕೊಂಡೊಯ್ಯುವ ಕಾರ್ಯಕರ್ತರು ಆ ಪಟ್ಟಿಯಲ್ಲಿ ಬೆಲೆ ಏರಿಕೆ ಸೇರಿಸಿಕೊಂಡಿದ್ದಾರೆಯೇ ? ಮೋದಿಯವರು ಉದ್ಯಮಿಗಳು, ಬಂಡವಾಳಶಾಹಿಗಳ ಪರ ಕೆಲಸ ಮಾಡುತ್ತಿದ್ದಾರೆ. ಬಡವರು, ಮಧ್ಯಮ ವರ್ಗದವರನ್ನು ಕೇಳುವವರಿಲ್ಲದಂತಾಗಿದೆ. ಭವಿಷ್ಯದ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆ ಬಿಸಿ ತಟ್ಟಲಿದೆ ಮತ್ತು ತಕ್ಕ ಪಾಠ ಕಲಿಯಲಿದೆ. ಬಿಜೆಪಿ ದುರಾಡಳಿತಕ್ಕೆ ಪಕ್ಷದೊಳಗೆಯೇ ಭಿನ್ನಾಭಿಪ್ರಾಯ ಕೇಳಿ ಬರುತ್ತಿದೆ ಎಂದರು.gur-july-20-cpim-3ಪ್ರತಿಭಟನಾ ಪ್ರದರ್ಶನದಲ್ಲಿ ಸಿಪಿಐಎಂ ಗುರುಪುರ ವಲಯ ಸಮಿತಿಯ ಗಂಗಯ್ಯ ಅಮೀನ್, ನೋಣಯ್ಯ ಗೌಡ, ಡಿ. ಅಶೋಕ್, ಬಾಬು ಸಾಲ್ಯಾನ್, ಭವಾನಿ ವಾಮಂಜೂರು, ಪುಷ್ಪಾ ವಾಮಂಜೂರು, ವಸಂತಿ ಕುಪ್ಪೆಪದವು, ವಾರಿಜಾ ಕುಪ್ಪೆಪದವು ಮತ್ತಿತರರು ಇದ್ದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.gur-july-20-cpim-4

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter