ಕೈಕಂಬ : ಒಂದು ತಿಂಗಳ ಹಿಂದೆ(ಜೂ. ೧೪) ಬಿರುಕು ಬಿಟ್ಟು ವಾಹನ ಸಂಚಾರ ನಿರ್ಬಂಧಿಸಲ್ಪಟ್ಟಿರುವ ಮರವೂರು ಹಳೆ ಸೇತುವೆಯ ಅಡಿ ಭಾಗದಲ್ಲಿ ಮಳೆ, ಪ್ರವಾಹ ಲೆಕ್ಕಿಸದೆ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಫಲ್ಗುಣಿ ನದಿಯಲ್ಲಿ ಪ್ರವಾಹ ಮಟ್ಟ ಹೆಚ್ಚಾಗಿದೆ. ಸೇತುವೆ ಬಿರುಕು ಬಿಟ್ಟಿರುವ ಪಿಲ್ಲರ್ ಭಾಗದಲ್ಲಿ ನದಿ ತಳದಿಂದ ಸೇತುವೆಯ ಮೇಲ್ಭಾಗದವರೆಗೆ ಕಬ್ಬಿಣದ ಸಲಾಕೆಗಳಿಂದ ಅಟ್ಟಳಿಕೆಯಿಂದ(ಜ್ಯಾಕ್ ಮಾದರಿಯಲ್ಲಿ) ಆಧಾರ ಕೊಡಲಾಗುತ್ತಿದೆ. ಈ ಕೆಲಸದ ಸಂದರ್ಭದಲ್ಲಿ ಕಾರ್ಮಿಕರು ನದಿ ನೀರಲ್ಲೇ ಕೆಲಸ ಮುಂದುವರಿಸಿದ್ದಾರೆ. ಸೇತುವೆಯ ಮತ್ತೊಂದು ಕಡೆಯಲ್ಲಿ ಬಂಡೆ ಕಲ್ಲುಗಳ ಆಧಾರ ಕಲ್ಪಿಸಲಾಗಿದೆ.gur-july-16-maravoor bridge-1ಗಡುವಿನಂತೆ ಜುಲೈ ಅಂತ್ಯದೊಳಗೆ ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, ಬಳಿಕ ಲಘು ವಾಹನಗಳು ಸೇತುವೆಯಲ್ಲಿ ಸಂಚರಿಸುವ ಸಾಧ್ಯತೆ ಇದೆ. ಅಲ್ಲೇ ಹತ್ತಿರದಲ್ಲಿ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿರುವ ಕಾವೂರು ಮೊಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯೇ ಮರವೂರು ಹಳೆ ಸೇತುವೆ ದುರಸ್ತಿ ಕಾಮಗಾರಿ ನಡೆಸುತ್ತಿದೆ.gur-july-16-maravoor bridge-2ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಘಟನೆ ಬಳಿಕ ಇಲ್ಲಿಗೆ ಭೇಟಿ ನೀಡಿದ ಬೆಂಗಳೂರಿನ ಸೇತುವೆ ಸಾಮರ್ಥ್ಯ ಪರಿಶೀಲನಾ ವಿಶೇಷಜ್ಞರು ಮತ್ತು ತಂತ್ರಜ್ಞರ ತಂಡವು ನೀಡಿದ ನಿರ್ದೇಶನದಂತೆ ಇಲ್ಲಿ ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಸೇತುವೆಯಲ್ಲಿ ವಾಹನ ನಿರ್ಬಂಧಿಸಿದ ಬಳಿಕ ಮಂಗಳೂರು-ಬಜ್ಪೆ ವಿಮಾನ ನಿಲ್ದಾಣ, ಬಜ್ಪೆ, ಕಟೀಲು ಭಾಗದ ವಾಹನ ಸಂಚಾರ ಸುತ್ತಿಬಳಸಿ ಸಂಚರಿಸುವಂತಾಗಿದೆ.IMG-20210716-WA0028

ಆಧುನಿಕ ತಂತ್ರಜ್ಞಾನದ ಮೂಲಕ ಸೇತುವೆಯ ಪಿಲ್ಲರ್ ಭದ್ರಗೊಳಿಸುವ ಕಾಮಗಾರಿ ನಡೆಯುತ್ತಿದೆ. ಕ್ಯೂರಿಂಗ್ ಆಗಬೇಕಿದೆ. ತಂತ್ರಜ್ಞರಿಂದ ಮತ್ತೊಂದು ಬಾರಿ ಸಮೀಕ್ಷೆ ನಡೆಯಲಿದೆ. ಗುಡುವಿನಂತೆ ಜುಲೈಯಲ್ಲೇ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಲಿದೆ” ಎಂದು ಮೊಗರೋಡಿ ಕನ್‌ಸ್ಟ್ರಕ್ಷನ್ ಸಂಸ್ಥೆಯ ಹಿರಿಯ ಇಂಜಿನಿಯರ್ ಸುಬ್ರಹ್ಮಣ್ಯ ತಿಳಿಸಿದರು. ಇದೇ ವೇಗದಲ್ಲಿ ಕಾಮಗಾರಿ ನಡೆದಲ್ಲಿ ಗಡುವಿನೊಳಗೆ ಮರವೂರು ಹಳೆ ಸೇತುವೆಯಲ್ಲಿ ವಾಹನ ಸಂಚಾರ ಆರಂಭವಾಗಲಿದೆ ಎಂದು ವ್ಯಾಪ್ತಿ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

By Suddi9

Leave a Reply

Your email address will not be published. Required fields are marked *