ಕೋಲಾರ: ಕೋಲಾರ ಮತ್ತು ಹೊಸಕೋಟೆ ನಗರಸಭೆ ಕಸವನ್ನು ಲ ಸಾಗರ ಕೆ.ಸಿ.ವ್ಯಾಲಿ ಪಕ್ಕದ ಅಕ್ರಮ ಕಲ್ಲುಕೋರೆಯಲ್ಲಿ ಸುರಿಯುತ್ತಿರುವುದನ್ನು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಜುಲೈ ೭ ರಂದು ಮಾನ್ಯ ಘನ ನ್ಯಾಯಾಲಯವು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರೂ ಇಲ್ಲಿಯವರೆಗೂ ನಿರಂತರವಾಗಿ ಜುಲೈ ೯ರ ವರೆಗೆ ನಗರಸಭೆಗಳ ತ್ಯಾಜ್ಯವನ್ನು ಸದರಿ ಸ್ಥಳದಲ್ಲಿಯೇ ಸುರಿಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಸಣ್ಣ ನೀರಾವರಿ ಇಲಾಖೆ, ಪರಿಸರ ಇಲಾಖೆ, ಗಣಿ ಇಲಾಖೆಗೆ ಮನವಿಗಳನ್ನು ಸಲ್ಲಿಸದರೂ ಯಾವುದೇ ಕ್ರಮ ಕೈಗೊಳ್ಳತ್ತಿಲ್ಲವೆಂದು ರೈತನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಆರೋಪಿಸಿದೆ.ramu1ಇಂದು ಸ್ಥಳಕ್ಕೆ ಭೇಟಿ ನೀಡಿ ಧರಣಿ ನಡೆಸಿದ ರೈತ ಸಂಘವು ಕೋಲಾರ ಮತ್ತು ಹೊಸಕೋಟೆ ನಗರಸಭೆ ಕಸವನ್ನು ಲಕ್ಷ್ಮೀಸಾಗರದ ಕೆ.ಸಿ.ವ್ಯಾಲಿ ಪಕ್ಕದ ಅಕ್ರಮ ಕಲ್ಲುಕೋರೆಯಲ್ಲಿ ಕಸವನ್ನು ಸುರಿಯುತ್ತಿದ್ದ ಅಕ್ರಮ ಕಲ್ಲುಕೋರೆಯ ಮಾಲೀಕರಿಗೆ ಕ್ವಾರೆಯನ್ನು ಮುಚ್ಚಲು ಎರಡು ನಗರಸಭೆ ಅಧಿಕಾರಿಗಳು ಕಸವನ್ನು ಕ್ವಾರೆಯೊಳಗೆ ಸುರಿದು ಕೋಲಾರ ನಗರಸಭೆ ಅಲ್ಲಿಯೇ ಒಂದು ಜೆ.ಸಿ.ಬಿ ಯಂತ್ರವನ್ನು ವಾಹನದ ಸಂಖ್ಯೆ: ಏಂ-೦೭ ಉ ೪೯೬ ರ ವಾಹನವನ್ನು ಸದರಿ ಸ್ಥಳದಲ್ಲಿಯೇ ಇಟ್ಟು ಕಸವನ್ನು ಕ್ಯಾಂಟರ್, ಟ್ರಾಕ್ಟರ್, ಟಾಟಾ ಏಸ್, ಇನ್ನಿತರೆ ವಾಹನಗಳಲ್ಲಿ ಕಸವನ್ನು ತುಂಬಿಕೊಂಡು ಬಂದು ಸುರಯುತ್ತಿದ್ದಾರೆ. ಆ ಕಸವನ್ನು ಜೆ.ಸಿ.ಬಿ ಯಂತ್ರದ ಮೂಲಕ ಅಕ್ರಮ ಕಲ್ಲು ಕ್ವಾರೆಯ ಒಳಗಡೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ramu3ಈ ಕಸವು ಮಳೆಗಾಲದಲ್ಲಿ ಅಕ್ರಮ ಕಲ್ಲುಕ್ವಾರೆ ಒಳಗಡೆ ನೀರು ನಿಂತ್ತು ಅದರಲ್ಲಿಯೇ ಕೊಳೆತು ನಾರಿ ಗಬ್ಬು ವಾಸನೆ ಬರುತ್ತಿದ್ದು, ಸೊಳ್ಳೆ, ನೊಣ, ಬೀದಿ ನಾಯಿಗಳು, ಹದ್ದು, ಕಾಗೆ, ಇನ್ನಿತರೆ ಪ್ರಾಣಿ ಪಕ್ಷಿಗಳು ಹೆಚ್ಚಾಗಿ, ಆ ತಾಜ್ಯವನ್ನು ಹೊತ್ತ ಕೆ.ಸಿ.ವ್ಯಾಲಿ ನೀರಿನೊಳಗೆ ಬೀಳುತ್ತಿದೆ. ಹಾಗೂ ಅಕ್ರಮ ಕಲ್ಲುಕೋರೆಯ ಒಳಗಡೆ ಅಂತರಜಲ ಸೇರಿ ಅಂತರ್‌ಜಲವು ಕಲಶಿತಗೊಂಡು ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ. ಇದರಿಂದ ಹಲವಾರು ಸಾಂಕ್ರಾಮಿಕ ರೋಗಗಳು ಸುತ್ತಮುತ್ತಲಿನ ಗ್ರಾಮಗಳಾದ ಲಕ್ಷ್ಮೀಸಾಗರ, ಅಪ್ಪಸಂದ್ರ, ರಾಮಸಂದ್ರ, ಉದಪ್ಪನಹಳ್ಳಿ, ನರಾಸಪುರ, ವೇಮಗಲ್ ಮಾರ್ಗವಾಗಿ ಕೆ.ಸಿ.ವ್ಯಾಲಿ ಹರಿಯುವ ಮಾರ್ಗದಕ್ಕೂ ಹಾಗೂ ನರಸಾಪುರದಿಂದ ಕೋಲಾರ ಮಾರ್ಗವಾಗಿ ಹರಿಯುತ್ತಿದ್ದು, ಹಲವಾರು ಸಾಂಕ್ರಾಮಿಕ ರೋಗಗಳು ಮುಂದಿನ ೫ ರಿಂದ ೧೦ ವರ್ಷ ಒಳಗೆ ಹರಡಲಿದ್ದು, ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಾನ್ಯ ಉಚ್ಚನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯು ಒತ್ತಾಯಿಸುತ್ತದೆ. ಹಾಗೂ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ramu2ಧರಣಿಯಲ್ಲಿ ರಾಜ್ಯ ಯುವ ಘಟದ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾಧ್ಯಕ್ಷ ಕೊತ್ತಮಿರಿ ಜಿ.ಮಂಜುನಾಥ್, ಜಿಲ್ಲಾ ಗೌರವಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಧನರಾಜ್, ವಿಶ್ವನಾಥರೆಡ್ಡಿ, ರಾಮು, ದೊಡ್ಡಕುರುಬರಹಳ್ಳಿ ಶಂಕರಪ್ಪ, ತೇರಹಳ್ಳಿ ಚಂದ್ರಪ್ಪ, ಕದಿರೇನಹಳ್ಳಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *