ನಮ್ಮ ದೇಶವನ್ನು ಅಣಬೆ ತಿನ್ನುವ ಪ್ರಧಾನ ಮಂತ್ರಿ ಆಳುತ್ತಿರುವುದು ದುರದೃಷ್ಟಕರ: ಮಾವಳ್ಳಿ ಶಂಕರ್ ಆರೋಪ
ಶ್ರೀನಿವಾಸಪುರ: ನಮ್ಮ ದೇಶವನ್ನು ಅಣಬೆ ತಿನ್ನುವ ಪ್ರಧಾನ ಮಂತ್ರಿ ಈ ದೇಶವನ್ನು ಆಳುತ್ತಿರುವುದು ದುರದೃಷ್ಟಕರ. ಸ್ವಾತ್ರಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಕಂದಾಚಾರ ಕೌರ್ಯಗಳು ಕಣ್ಣು ಮುಂದೆ ಕುಣಿಯುತ್ತಿದ್ದರೂ ಆಳುವ ಸರ್ಕಾರಗಳು ಕಣ್ಣು ಮುಚ್ಚಿ ಕುಳಿತಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಆರೋಪಿಸಿದರು.ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ವಿದ್ಯಾರ್ಥಿನೀಯರ ಮೇಲೆ ನಡೆದಿರುವ ದೌಜನ್ಯವನ್ನು ಖಂಡಿಸಿ ತಾಡಿಗೋಳ್ ಗ್ರಾಮದಿಂದ ಜಾಥಾವನ್ನು ೧೧ ದಲಿತ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದು ನಂತರ ತಾಲ್ಲೂಕು ಕಛೇರಿ ಮುಂದೆ ಏರ್ಪಡಿಸಲಾಗಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ವ್ಯವಸ್ಥೆ ಆಳುವ ಸರ್ಕಾರಗಳು ವಿಲಾಸ ಜೀವನವನ್ನು ನಡೆಸುತ್ತಿದ್ದಾರೆ. ಈ ದೇಶವನ್ನು ಬಸವಣ್ಣ, ಬುದ್ದ, ಅಂಬೇಡ್ಕರ್ ಹೀಗೆ ಅನೇಕ ಮಹನೀಯರು ಈ ರಾಷ್ಟ್ರವನ್ನು ಕಟ್ಟಿದ್ದಾರೆ. ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ ನಿಲ್ಲುತ್ತಿಲ್ಲ ಈ ದೇಶವನ್ನು ಆಳುವ ಮೋದಿ ಸರ್ಕಾರ ಸಂವಿಧಾನ ವಿರೋಧಿಗಳಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.
ಈ ರಾಜ್ಯದಲ್ಲಿ ೧೯೮ ಕೊಲೆಗಳು ಆಗಿದೆ ಆದರೆ ಶಿಕ್ಷೆಯ ಪ್ರಮಾಣ ಶೇ.೨ರಷ್ಟು ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಸಂಸದರು ದೌರ್ಜನಗುಕ್ಕೊಳಗಾದ ಗ್ರಾಮಗಳಿಗೆ ಹೋಗುತ್ತಿಲ್ಲ. ಗುಜರಾತ್, ಬಿಹಾರ, ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಘಟನೆಗಳು ಈ ಜಿಲ್ಲೆ ಮತ್ತು ತಾಲೂಕಿನಲ್ಲಿ ನಡೆದಿರುವುದು ತುಂಬಾ ಶೋಷನೀಯ. ನಮ್ಮ ದಲಿತ ಸಂಘಟನೆಗಳು ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡುತ್ತೇವೆ.
ಈ ದೇಶ ವಿಶ್ವಗುರು ಆಗುವುದಕ್ಕೆ ಹೊರಟಿದೆ. ದೇಶದಲ್ಲಿ ಒಂದು ಆರ್.ಎಸ್.ಎಸ್ ಇರಬೇಕು ಅಥವಾ ಡಿ.ಎಸ್.ಎಸ್ ಇರಬೇಕು. ಆದ್ದರಿಂದ ಹಳ್ಳಿಯಲ್ಲಿ ಕಾರ್ಯಕರ್ತರು ಎಚ್ಚೆತ್ತುಕೊಂಡು ಇಂತಹ ಘಟನೆಗಳು ಮರುಕಳಿಸಿದಂತೆ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ಈ ಚಳುವಳಿಗೆ ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಿದ್ದೀರಿ. ಈ ನೆಲದ ಕಾನೂನನನ್ನು ಪೊಲೀಸರು ಕಾಪಾಡಬೇಕು. ನೊಂದವರ ಪರ ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು.
ಕೋಲಾರದ ಯುವ ಜನತೆ ಇಂತಹ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಜಿಲ್ಲೆಯಲ್ಲಿ ಅನೇಕ ದಲಿತ ಸಂಘಟನೆಯ ಮುಖಂಡರು ಹೋರಾಟಗಳನ್ನು ನಡೆಸಿ ಅವರ ತ್ಯಾಗ, ಬಲಿದಾನಗಳು ಇಂದು ನಮಗೆ ಸ್ಪೂರ್ತಿಯಾಗಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಎನ್. ಮುನಿಸ್ವಾಮಿ ಮಾತನಾಡಿ ತಾಡಿಗೋಳ್ ಗ್ರಾಮದಲ್ಲಿ ನಡೆದ ಘಟನೆ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಅಮಾನುಷ ಹೀನ ಕೃತ್ಯಗಳನ್ನು ಇನ್ನು ಮುಂದೆ ಆಗದಂತೆ ದಲಿತ ಸಂಘಟನೆಗಳು ಎಚ್ಚೆತ್ತುಕೊಳ್ಳಬೇಕು ಇದಕ್ಕೆಲ್ಲ ಕಾರಣ ಪೊಲೀಸ್ ವೈಫಲ್ಯವೇ ಕಾರಣ ಒಬ್ಬ ಜವಾಬ್ದಾರಿ ಡಿ.ವೈ.ಎಸ್.ಪಿ. ಕೇವಲ ಬಸ್ ಸೀಟಿಗಾಗಿ ಎಂದು ಹೇಳಿರುವುದು ದುರದೃಷ್ಟಕರ ಈ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ಹೋರಾಟಗಳ ತವರೂರಾಗಿದೆ. ಈ ಜಿಲ್ಲೆಗಳಲ್ಲಿ ಗುಂಡಾ ಸಂಸ್ಕೃತಿ ನಿಲ್ಲಬೇಕು ಈ ದೇಶ ಪುರುಷ ಮತ್ತು ಮಹಿಳಾ ಪ್ರಧಾನ ರಾಷ್ಟ್ರವಾಗಿದ್ದು ಎಲ್ಲರಿಗೂ ಸಮಾನ ಹಕ್ಕುಗಳು ಸಿಗಬೇಕು ಈ ಸಂಸ್ಕೃತಿಯನ್ನು ಮಟ್ಟ ಹಾಕುವ ಕೆಲಸ ನಾವೆಲ್ಲರೂ ಮಾಡಬೇಕು ಅನ್ಯಾಯದ ವಿರುದ್ದ ದ್ವನಿ ಎತ್ತುವ ಕೆಲಸ ಮಾಡುತ್ತೇವೆ. ಇಂತಹ ಗುಂಡಾ ಸಂಸ್ಕೃತಿಗೆ ಜಿಲ್ಲೆಯಲ್ಲಿ ಕಡಿವಾಣ ಹಾಕಬೇಕು ಎಂದರು.
ರಾಜ್ಯ ದಲಿತ ಸಂಘರ್ಷ ಸಮಿತಿಯ ಮುಖಂಡ ಗೊಳ್ಳಹಳ್ಳಿ ಶಿವಪ್ರಸಾದ್ ಮಾತನಾಡಿ ಹೆಣ್ಣು ಮಕ್ಕಳ ಮೇಲೆ ಗುಂಡಾ ವರ್ತನೆ ತೋರಿದ ಮಹಿಳೆಯನ್ನು ಕೂಡಲೇ ಬಂಧಿಸಬೇಕು ಕುಟುಂಬಕ್ಕೆ ನ್ಯಾಯವನ್ನು ಒದಗಿಸುವ ಕೆಲಸ ಆಗಬೇಕು ಈ ಬೃಹತ್ ಜಾಥದಲ್ಲಿ ಎಲ್ಲಾ ಸಂಘಟನೆಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ ಅನ್ಯಾಯವಾದಾಗ ದ್ವನಿ ಎತ್ತುವ ಕೆಲಸ ನಾವು ಮಾಡುತ್ತೇವೆ ನಮ್ಮ ಪ್ರಾಣ ಇರುವರೆಗೂ ಇಂತಹ ದೌರ್ಜನ್ಯ, ದಬ್ಬಾಳಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಎನ್. ವೆಂಕಟೇಶ್, ದಲಿತ ಪ್ರಜಾ ಸೇನೆಯ ಜಿಲ್ಲಾಧ್ಯಕ್ಷ ಡಿ.ಪಿ.ಎಸ್. ಮುನಿರಾಜು, ನರಾಸಪುರ ನಾರಾಯಣಸ್ವಾಮಿ, ಆಂದ್ರ ಪ್ರದೇಶದ ದಲಿತ ಮುಖಂಡ ಶಿವಪ್ರಸಾದ್, ಸ್ವಾಭಿಮಾನಿ ಚಳುವಳಿಯ ದೇವರಾಜ್, ಕಾರಹಳ್ಳಿ ಶ್ರೀನಿವಾಸ್, ಗಾಂಧಿನಗರ ವೆಂಕಟೇಶ್, ಹಾರೋಹಳ್ಳಿ ರವಿ, ದಲಿತ ಬುದ್ದಸೇನೆಯ ರಾಜ್ಯದ್ಯಕ್ಷ ವರ್ತನಹಳ್ಳಿ ವೆಂಕಟೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಅಗ್ರಹಾರ ವೆಂಕಟೇಶ್, ದಲಿತ ಮುಖಂಡರಾದ ಈರಪ್ಪ, ರಾಮಾಂಜಮ್ಮ, ದೊಡ್ಡಬಂದರ‍್ಲಹಳ್ಳಿ ಮುನಿಯಪ್ಪ, ಮುಳಬಾಗಲಪ್ಪ, ಮುದಿಮುಡುಗು ವಾಸು, ಉಪ್ಪರಪಲ್ಲಿ ತಿಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.