ಕೋಲಾರ: ಸರಕಾರಿ ಶಾಲೆಗಳ ಬಲವರ್ಧನೆಗೆ ದೆಹಲಿ ಮಾದರಿಯಲ್ಲಿ ಪ್ರತ್ಯೇಕ ಬಜೆಟ್ ಅಗತ್ಯ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಅಭಿಪ್ರಾಯಪಟ್ಟರು. ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸೇವಾದಳ ಜಿಲ್ಲಾ ಸಮಿತಿ ನೀಡಿದ ಬೀಳ್ಕೊಡುಗೆ ಸನ್ಮಾನ ಸ್ಪೀಕರಿಸಿ ಅವರು ಮಾತನಾಡುತ್ತಿದ್ದರು. ಸರಕಾರಿ ಶಾಲೆಗಳಿಗೆ ಕೊರೊನಾ ಸಂಕಷ್ಟ ಸಹಕಾರಿಯಾಗಿದ್ದು, ಈ ಎರಡು ವರ್ಷಗಳಲ್ಲಿ ಖಾಸಗಿ ಶಾಲೆಗಳಿಂದ ಸುಮಾರು ೬ ಸಾವಿರ ಮಂದಿ ಮಕ್ಕಳು ಸರಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸಬೇಕೆಂದರು.
ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಅಲ್ಲೊಂದು ಪ್ರಗತಿಯ ಬದಲಾವಣೆ ಕಾಣಬೇಕು ಎಂಬ ಧ್ಯೇಯದೊಂದಿಗೆ ತಾವು ಬಿಇಒ ಕೆಲಸ ಮಾಡಿದ್ದು, ಇಸಿಒ, ಬಿಆರ್‌ಪಿ, ಸಿಆರ್‌ಪಿ, ಶಿಕ್ಷಕ ವರ್ಗದೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಕರ್ತವ್ಯ ನಿರ್ವಹಣೆ ಮಾಡಿದ್ದೇನೆೆ. ಕೋಲಾರ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಸಾಗುವಂತಾಗಲು ನಾವೇ ಪರಿಶ್ರಮ ಹಾಕಬೇಕು, ಇನ್ಯಾರೋ ಬಂದು ಉದ್ಧಾರ ಮಾಡುವುದಿಲ್ಲವೆಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದರು. ತಮ್ಮ ಏಳೆಂಟು ವರ್ಷಗಳ ಸೇವಾವಧಿಯಲ್ಲಿ ಅಂದುಕೊಂಡಿದ್ದೆಲ್ಲವನ್ನು ಪೂರ್ಣಗೊಳಿಸಿದ್ದೇನೆಂಬ ತೃಪ್ತಿ ಇಲ್ಲವಾದರೂ, ಇಲಾಖೆಗೆ ಅಗೌರವ ಧಕ್ಕೆ ತಾರದಂತೆ ಕರ್ತವ್ಯ ನಿರ್ವಹಿಸಿರುವ ಸಂತೃಪ್ತಿ ತಮಗಿದೆಯೆಂದು ವಿವರಿಸಿದರು.
ಕೋಲಾರದ ಯಾವುದರೂ ರಸ್ತೆಯಲ್ಲಿ ಎರಡೂ ಬದಿ ಒಂದೇ ಜಾತಿಯ ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಬೇಕೆಂಬ ಗುರಿಯನ್ನು ತಾವು ಹೊಂದಿದ್ದು, ಸಮಾಜ ಸೇವಕ ಶ್ರೀನಾಥ್ ಮತ್ತು ಸೇವಾದಳ ಪದಾಧಿಕಾರಿಗಳು ಸಹಕಾರ ನೀಡಬೇಕೆಂದು ಕೋರಿದರು. ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೋಲಾರ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಮರ್ಥ ಅಧಿಕಾರಿಗಳ ಪರಿಶ್ರಮವೇ ಕಾರಣವಾಗಿದ್ದು, ನಿವೃತ್ತ ಬಿಇಒ ನಾಗರಾಜಗೌಡರ ಸೇವೆ ಮುಂದಿನ ಅಧಿಕಾರಿಗಳಿಗೆ ಮಾರ್ಗದರ್ಶನ ಮಾದರಿಯಾಗಲಿ ಎಂದರು. ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸೇವಾದಳದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನಿವೃತ್ತ ಬಿಇಒ ನಾಗರಾಜಗೌಡರಿಗೆ ಸೇವಾದಳ ಜಿಲ್ಲಾ ಸಮಿತಿಯಲ್ಲಿ ವಿಶೇಷ ಆಹ್ವಾನಿತರನ್ನಾಗಿಸಿ ಆಯ್ಕೆ ಮಾಡಿಕೊಳ್ಳಲಾಗುವುದು ಮತ್ತು ಈ ಬಾರಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಸೇವಾದಳದಿಂದ ನಾಗರಾಜಗೌಡರನ್ನು ಪ್ರಶಸ್ತಿಗೆ ಆಯ್ಕೆ ಮಾಡಿಕೊಂಡು ಸ್ವಚ್ಛಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹಾಗೂ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಬಿಇಒ ನಾಗರಾಜಗೌಡರೊಂದಿಗಿನ ತಮ್ಮ ಸೇವಾವಽಯಲ್ಲಿ ನಡೆಸಿದ ಸ್ವಚ್ಛತಾ ಆಂದೋಲನ ಮತ್ತು ಸಸಿ ನೆಡುವ ಕಾರ್ಯಕ್ರಮದ ಅನುಭವಗಳನ್ನು ಹಂಚಿಕೊAಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್, ಕೋಶಾಧ್ಯಕ್ಷ ರವಿಕುಮಾರ್, ನಂದಿನಿ, ಪದಾಧಿಕಾರಿಗಳಾದ ವಿ.ಪಿ.ಸೋಮಶೇಖರ್, ಬೈರೇಗೌಡ, ಶ್ರೀರಾಮ್, ಸಂಪತ್‌ಕುಮಾರ್, ಫಲ್ಗುಣ, ಪೈಂಟರ್ ಬಷೀರ್, ಮುನಿವೆಂಕಟ್,ಚಾನ್‌ಪಾಷಾ, ಬಿಇಒ ಕಚೇರಿಯ ವ್ಯವಸ್ಥಾಪಕ ಗಿರೀಶ್, ದೀಕ್ಷಿತ್, ವಿಶ್ವ ಇತರರು ಹಾಜರಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮ ರಾಷ್ಟçಗೀತೆ ಗಾಯನದೊಂದಿಗೆ ಪೂರ್ಣಗೊಂಡಿತು. ಕೋಲಾರ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸೇವಾದಳ ಜಿಲ್ಲಾ ಸಮಿತಿವತಿಯಿಂದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡರಿಗೆ ಬೀಳ್ಕೊಡುಗೆ ಸನ್ಮಾನ ನೀಡಿ ಗೌರವಿಸಲಾಯಿತು.
-_______________________________
