ಸುದ್ದಿ9ಕೈಕಂಬ:ಪ್ರತಿಯೊಬ್ಬ ವ್ಯಕ್ತಿಯು ದುಡಿಮೆಯೊಂದಿಗೆ ಭವಿಷ್ಯದ ತನ್ನ ವೃದ್ದಾಪ್ಯದ ಕುರಿತು ಯೋಚಿಸುವುದು ಅಗತ್ಯವಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುತಿರುವ ಕಾರ್ಮಿಕರಿಗೆ ವೃದ್ದಾಪ್ಯದ ಪಿಂಚಣಿಗಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ನಿವೃತ್ತಿ ಪಿಂಚಣಿಗಾಗಿ ಉಳಿತಾಯ ಮಾಡುವುದನ್ನು ಪ್ರಾರಂಭಿಸೋಣ ಎಂದು ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ ಹೇಳಿದರು ಅವರು ಮೂಡುಶೆಡ್ಡೆ ಗ್ರಾಮದ ಹೊಸ್ಮಾರ್ ಗೀತಾ.ಜೆ ಮನೆ ವಠಾರದಲ್ಲಿ ನಡೆದ ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಸ್ವಚ್ಛ ಪರಿಸರ ಮಾಹಿತಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಇನ್ನೊರ್ವ ಮುಖ್ಯ ಅತಿಥಿ ದಿಶಾ ಸಂಸ್ಥೆಯ ನಿದರ್ೇಶಕರಾದ ಸಿಲ್ವೆಸ್ಟರ್ ಡಿ’ಸೋಜ ಮಾತನಾಡಿ, ಪ್ರತಿಯೊಬ್ಬರು ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಬಿಸಾಡದೇ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಪಣ ತೊಡಬೇಕು, ಬೇಡದ ಪ್ಲಾಸ್ಟಿಕ್ ಬಿಸಾಡೆದೇ ಗೋಣಿ ಚೀಲದಲ್ಲಿ ಸಂಗ್ರಹಿಸುವ ಅಭ್ಯಾಸ ರೂಡಿಸಬೇಕೆಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಮ್.ವಿ.ಶೆಟ್ಟಿ ಸಮಾಜಕಾರ್ಯ ಕಾಲೇಜಿನ ಉಪನ್ಯಾಸಕರಾದ ಶ್ರೀ ಶುಭಕರ್ ಅಂಚನ್ ಮಾತನಾಡಿ ಸ್ವಚ್ಛ ಪರಿಸರ ನಿರ್ಮಾಣದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು. ಡಾ/ಎಮ್.ವಿ ಶೆಟ್ಟಿ ಸಮಾಜಕಾರ್ಯ ಕಾಲೇಜು ವಿದ್ಯಾನಗರ ಮಂಗಳೂರು ಮತ್ತು ದಿಶಾ ಟ್ರಸ್ಟ್ ಕೈಕಂಬ , ಇವರ ಜಂಟಿ ಆಶ್ರಯದಲ್ಲಿ ನಡೆದ ಮಾಹಿತಿ ಕಾರ್ಯಗಾರದ ಅಧ್ಯಕ್ಷತೆಯನ್ನು ಮೂಡುಶೆಡ್ಡೆ ನೇಸರ ಸಮಿತಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಆಳ್ವ ಮೇಗಿನ ಮನೆ ವಹಿಸಿದ್ದರು. ಸಮಾಜಕಾರ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ವಿಜಯಲಕ್ಷ್ಮಿ ನಾಯಕ್ ಕಾರ್ಯಕ್ರಮ ನಿರೂಪಿಸಿ, ಅನ್ಸು ಡೈಮಾರಿ ಸ್ವಾಗತಿಸಿ, ಪ್ರಶಾಂತ್ .ಎಚ್ ವಂದಿಸಿದರು.25vp mahithi karyagara-

By Suddi9

Leave a Reply

Your email address will not be published. Required fields are marked *