ಮುಂಬಯಿ: ಕೊರೋನಾ ಎರಡನೇ ಅಲೆಯಿಂದಾಗಿ ಸರಕಾರ ಹೇರಿರುವ ಲಾಕ್ಡೌನ್ ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಸಹಾಯವನ್ನು ಮಾಡುವ ಉದ್ದೇಶದಿಂದ ಸಹಾಯಧನವನ್ನು ವಿತರಿಸಲಾಗಿದೆ ಎಂದು ಸಮಾಜ ಸೇವಕ  ಅನ್ವರ್ ಬಜಾಲ್ ಹೇಳಿದರು.IMG-20210602-WA0129
ಕೆ.ಪಿ ಅಬೂಬಕರ್ ಸ್ಮರಣಾರ್ಥ ಉದ್ಯಮಿಗಳಾದ ಬಿಪಿನ್ ರೈ ಮತ್ತು ಅನ್ವರ್ ಬಜಾಲ್ ನೇತೃತ್ವದಲ್ಲಿ  ಲಾಕ್ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಎಲ್ಲಾ ವರ್ಗದ  ರಿಕ್ಷಾ ಚಾಲಕರಿಗೆ ಬಜಾಲ್ ಪಕಲಡ್ಕದಲ್ಲಿ ಬುಧವಾರ ತಲಾ ರೂ.2,000 ಸಹಾಯಧನ ವಿತರಿಸಿ ಅನ್ವರ್ ಮಾತನಾಡಿದರು.IMG-20210602-WA0131
ಲಾಕ್ಡೌನ್ ನಿಂದ  ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದು,  ಅವರ ಬದುಕಿನಲ್ಲಿ ಯಶಸ್ವಿಯಾಗಿ ಮುಂದುವರಿಯಲು ಆತ್ಮವಿಶ್ವಾಸ ಬೇಕಿದೆ. ಅದನ್ನು ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಹಿಂದಿನ ಲಾಕ್ಢೌನ್ ಸಂದರ್ಭದಲ್ಲಿಯೂ 300 ಆಹಾರದ ಕಿಟ್ ಗಳನ್ನು ನೀಡಿ ಸಹಕರಿಸಲಾಗಿತ್ತು. ಇಂದು 150 ಮಂದಿ ರಿಕ್ಷಾ ಚಾಲಕರಿಗೆ ಸಹಾಯಧನ ವಿತರಿಸಿದ್ದೇವೆ. ಇದರಿಂದ ಇತರೆ ಸಂಘ ಸಂಸ್ಥೆಗಳು ಪ್ರೋತ್ಸಾಹಿತರಾಗಿ ಸಂಕಷ್ಟಕ್ಕೆ ಒಳಗಾದವರಿಗೆ  ಸಹಕರಿಸಲಿ ಎಂದರು.
IMG-20210602-WA0128
ಈ ಸಂದರ್ಭ ಮಂಗಳೂರು ನಗರ ಪಾಲಿಕೆ ಸದಸ್ಯ  ಪ್ರವೀಣ್ಚಂದ್ರ ಆಳ್ವ ,ಬಜಾಲ್ ಪಕಲಡ್ಕ ಮೊಯುದ್ದೀನ್ ಜುಮಾ‌ ಮಸೀದಿಯ ಖತೀಬ್ ಬಶೀರ್ ವ‌ಆಬಿ, ಜಾನಪದ ಪರಿಷತ್ ನ ಪಮ್ಮಿ ಕೋಡಿಯಾಲ್ ಬೈಲ್,
ಮೊಯ್ಯುದ್ದೀನ್ ಜುಮಾ‌ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅಲ್ತಾಫ್ ,‌ ರಿಫಾಯಿಯ್ಯಾ ದಫ್  ಕಮಿಟಿಯ ಪ್ರ.ಕಾರ್ಯದರ್ಶಿ  ಶಬೀರ್ ಅಹ್ಮದ್ ಉಪಸ್ಥಿತರಿದ್ದರು.IMG-20210602-WA0133
ಬದುಕು ಸಂಕಷ್ಟದಲ್ಲಿದೆ. ನೂರಾರು ಮಂದಿ ರಿಕ್ಷಾವನ್ನೇ ಅವಲಂಬಿಸಿ ಬದುಕು ನಡೆಸುವವರಿದ್ದಾರೆ. ಅವರಿಗೆ ಸಹಕರಿಸುವ  ಮೂಲಕ ಅನ್ವರ್ ಮತ್ತು ಬಿಪಿನ್ ರೈ ಮಾನವೀಯತೆ‌ ಎತ್ತಿ ಹಿಡಿದಿದ್ದಾರೆ. ಈ ಹಿಂದೆಯೂ ಜನರ ಸಂಕಷ್ಟಕ್ಕೆ ಸಹಕರಿಸುವ ಮೂಲಕ ಜನರ ಕಷ್ಟದಲ್ಲಿ ಕೈ ಜೋಡಿಸಿದ್ದಾರೆ.
ಬಶೀರ್ ರಿಕ್ಷಾ ಚಾಲಕರು ಪಕಲಡ್ಕ ರಿಕ್ಷಾ ಪಾಕ್೯ನಲ್ಲಿ ಹಲವು ರಿಕ್ಷಾ ಚಾಲಕರಿದ್ದು, ಲಾಕ್ಡೌನ್ ನಂತರ ಜೀವನ ಸಾಗಿಸಲು ಕಷ್ಟಕರ ವಾಗಿತ್ತು. ಇದಕ್ಕೆ ಅನ್ವರ್ ಬಜಾಲ್ ನೇತೃತ್ವದಲ್ಲಿ ಸಹಕರಿಸುವ ಕಾರ್ಯವಾಗಿದೆ. ಅದರಂತೆ ಇತರೆಡೆಯೂ ಸಂಕಷ್ಟದಲ್ಲಿರುವ ಜನರಿಗೆ ಇತರರು ಸಹಕರಿಸುವ ಕಾರ್ಯಗಳಾಗಲಿ ಎಂದು
ಸಾಮಾಜಿಕವಾಗಿ ಕಾರ್ಯಕರ್ತಫೈರೂಝ್ ಮಂಗಳೂರು ಎಂದರು.

By suddi9

Leave a Reply

Your email address will not be published. Required fields are marked *