ಕೈಕಂಬ: ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕೊಳದಬದಿ-ಬಡಕರೆ ಎಂಬಲ್ಲಿ ಹಾದು ಹೋಗಿರುವ ಬೃಹತ್ ಪರಂಬೋಕು ತೋಡೊಂದರಲ್ಲಿ ತುಂಬಿರುವ ಹೂಳು, ಆಳೆತ್ತರಕ್ಕೆ ಬೆಳೆದಿರುವ ಗಿಡಗಂಟಿ ಹಾಗೂ ತ್ಯಾಜ್ಯ ರಾಶಿ ತೆರವು ಕಾರ್ಯ ಸರ್ಕಾರ ನರೇಗಾ ಯೋಜನೆಯಡಿ ಆರಂಭಗೊಂಡಿದೆ.gur-may-19-narega kelasa-3

ಸ್ಥಳೀಯ ಉತ್ಸಾಹಿ ಯುವಕ, ಯುವತಿಯರು ಮತ್ತು ಹಿರಿಯರು ಹೂಳೆತ್ತುವ ಹಾಗೂ ತೋಡಿನ ದುರಸ್ತಿ ಮಾಡುತ್ತಿದ್ದಾರೆ. ಇದು ಅಂದಾಜು ಒಂದು ಲಕ್ಷಕ್ಕೂ ಹೆಚ್ಚಿನ ಮೊತ್ತದ ಕೆಲಸವಾಗಿದ್ದು, ನರೇಗಾದ ಹಣಕಾಸಿನ ನೆರವಿನಡಿ ಕಾಮಗಾರಿ ನಡೆಯುತ್ತಿದೆ. ಬುಧವಾರದಿಂದ ಕಾಮಗಾರಿ ಆರಂಭಗೊಂಡಿದ್ದು, ತೋಡಿನಲ್ಲಿ ಸುಮಾರು ಒಂದೂವರೆ ಕಿಮೀ ಉದ್ದಕ್ಕೆ ಹೂಳೆತ್ತುವ ಕಾರ್ಯ ನಡೆಯಲಿದೆ. ಮೂರ್ನಾಲ್ಕು ದಿನದಲ್ಲಿ ವರ್ಷಗಳಿಂದ ತುಂಬಿರುವ ಹೂಳು ತೆರವಾಗಲಿದೆ.gur-may-19-narega kelasa-1

“ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯ ಸದುಪಯೋಗ ಪಡೆದುಕೊಂಡಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಒಂದಷ್ಟು ಅಗತ್ಯ ಅಭಿವೃದ್ಧಿ ಕೆಲಸಗಳು ನಡೆಯಲು ಸಾಧ್ಯವಿದೆ. ಯುವಜನರು ಮುಂದೆ ಬಂದು ಇಂತಹ ಕೆಲಸದಲ್ಲಿ ತೊಡಗಿಸಿಕೊಂಡರೆ ಆರ್ಥಿಕತೆ ಸದೃಢಗೊಳ್ಳಲಿದೆ” ಎಂದು ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಹಾಗೂ ಪಿಡಿಒ ಅಬೂಬಕ್ಕರ್ ತಿಳಿಸಿದರು.

ಗುರುಪುರ ಪಂಚಾಯತ್‍ನ ಮೂಳೂರು ಗ್ರಾಮದ ಒಂದನೇ ವಾರ್ಡ್‍ನ ಸದಸ್ಯರಾದ ಸುನಿಲ್ ಜಲ್ಲಿಗುಡ್ಡೆ, ಕೆ ಸದಾಶಿವ ಶೆಟ್ಟಿ ಮತ್ತು ಶೋಭಾ ಎ ಸಹಕಾರದೊಂದಿಗೆ ತೋಡಿನ ಹೂಳೆತ್ತುವ ಕೆಲಸ ನಡೆಯುತ್ತಿದೆ. ಸ್ಥಳೀಯ ವ್ಯಕ್ತಿಯಾಗಿರುವ ಪಂಚಾಯತ್‍ನ ಮತ್ತೊಂದು ವಾರ್ಡ್‍ನ ಸದಸ್ಯ ಸಚಿನ ಅಡಪ(ತಾಪಂ ಮಾಜಿ ಸದಸ್ಯ) ಈ ತಂಡಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *