Published On: Wed, May 12th, 2021

ಕರಿಯಂಗಳ ಗ್ರಾ.ಪಂ.ನಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ

ಬಂಟ್ವಾಳ: ಕೋವಿಡ್ ನಿಯಂತ್ರಣ ಸಾಧಿಸಲು ಟಾಸ್ಕ್ ಫೋರ್ಸ್ ಸಮಿತಿ , ಅಧಿಕಾರಿಗಳು ಅಯಾಯ ಗ್ರಾಮದಲ್ಲಿ ನಿಷ್ಠುರ ವಾಗಿ ಕೆಲಸ ಮಾಡಬೇಕಾಗಿದೆ, ಯಾರ ಬಗ್ಗೆಯೂ ಅನುಕಂಪ ಬೇಡ , ಸರಕಾರದ ನಿಯಮದ ಪ್ರಕಾರ ಕೆಲಸ ಮಾಡಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.08d3522c-5934-4818-8c6c-8df150d549ed

ಅವರು ಕರಿಯಂಗಳ ಗ್ರಾ.ಪಂ.ನಲ್ಲಿ ಕೋವಿಡ್ ನಿಯಂತ್ರಣ ಸಾಧಿಸಲು ಸಹಾಯವಾಗುವ ನಿಟ್ಟಿನಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಹಾಗೂ ಕೋವಿಡ್ ವ್ಯಾಕ್ಸಿನೇಷನ್‌ ಅನ್ನು ಪ್ರತಿಯೊಬ್ಬರೂ ಪಡೆಯಲು ಮಾಡಬೇಕಾದ ಕ್ರಮಗಳ ಬಗ್ಗೆ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೊರೊನಾ ನಿಯಂತ್ರಣ ಕ್ಕಾಗಿ ಶಾಸಕರ ವಾರ್ ರೂಂ ಕಾರ್ಯನಿರ್ವವಣೆ ಮಾಡುತ್ತಿದ್ದು ದಿನದ 24 ಗಂಟೆಯೂ ಸಹಾಯ ಪಡೆಯಬಹುದು ಎಂದು ಅವರು ತಿಳಿಸಿದರು.
ಕರಿಯಂಗಳ ಗ್ರಾಮ ವ್ಯಾಪ್ತಿಯಲ್ಲಿ ಲಸಿಕೆ ಪಡೆದವರು ಅತ್ಯಂತ ಕಡಿಮೆ ಜನ ಇರುವುದರ ಬಗ್ಗೆ ಶಾಸಕರು ಕಾರಣ ಕೇಳಿದರು, ಜೊತೆಗೆ ಗ್ರಾಮದ ಪ್ರತಿಯೊಬ್ಬರೂ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.

ಜವಬ್ದಾರಿಯುತ ಸ್ಥಾನದಲ್ಲಿರುವ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರುಗಳು ಕಡ್ಡಾಯವಾಗಿ ಲಸಿಕೆ ಪಡೆಯಲು ನೊಂದಾವಣೆ ಮಾಡಿ ಎಂದು ತಿಳಿಸಿದರು.

ಮೊದಲ ಡೋಸ್ ಕೋವಿಡ್ ಲಸಿಕೆ ಪಡೆಯುವ ಪ್ರತಿಯೊಬ್ಬರೂ ಕಡ್ಡಾಯವಾಗಿ ನೊಂದಾವಣೆ ಮಾಡಬೇಕು , ಎರಡನೇ ಡೋಸ್ ಲಸಿಕೆ ಪಡೆಯುವವರು ನೊಂದಾವಣೆ ಮಾಡಬೇಕಾದ ಅಗತ್ಯ ವಿಲ್ಲ ಇಲಾಖೆಯೆ ಸಂದೇಶ ಕಳುಹಿಸಿ ಬರಲು ಹೇಳುತ್ತಾರೆ.
ಯಾರು ಕೂಡ ಅತಂಕಪಡುವ ಅಗತ್ಯವಿಲ್ಲ ಎಂದು ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್ ಮಾಹಿತಿ ನೀಡಿದರು. ನ್ಯಾಯ ಬೆಲೆ ಅಂಗಡಿಗೆ ಹೋಗುವವರನ್ನು ಪೋಲೀಸರು ತಡೆಯದಂತೆ ಸಭೆಯಲ್ಲಿ ತಿಳಿಸಿದರು.

ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು ಆರು ಮನೆಯ 12 ಕೊರೊನಾ ಪ್ರಕರಣಗಳಿದ್ದು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ 9 ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ನೀಡಿದರು.ಟಾಸ್ಕ್ ಫೋರ್ಸ್ ಸಮಿತಿಯ ನಿರ್ಧಾರ ಒಂದೇ ರೀತಿಯಲ್ಲಿ ದ್ದು, ನಿಯಮ ಪಾಲನೆಗೆ ಅಡ್ಡಿಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮಕೈಗೊಳ್ಳಿ ಎಂದು ತಾ.ಪಂ.ಇ.ಒ.ರಾಜಣ್ಣ ತಿಳಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಉಪಾಧ್ಯಕ್ಷೆ ವೀಣಾ ಆಚಾರ್ಯ,  ಬೂಡ ಆದ್ಯಕ್ಷ ದೇವದಾಸ ಶೆಟ್ಟಿ, ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ,ಸಿ.ಡಿ.ಪಿ.ಒ ಗಾಯತ್ರಿಕಂಬಳಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ , ಪಿ.ಡಿ.ಒ.ನಯನ ಗ್ರಾಮ ಕರಣಿಕ ಪ್ರಶಾಂತ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿ , ಅಧಿಕಾರಿಗಳು, ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ರಮಾನಾಥ ರಾಯಿ ಮತ್ತಿತರರು ಉಪಸ್ಥಿತರಿದ್ದರು.

 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter