Published On: Mon, Apr 26th, 2021

ಶಿವಗಿರಿ ಮಹಿಳಾ ಸಹಕಾರಿ ಸಂಘ ಉದ್ಘಾಟನೆ

ಬಂಟ್ವಾಳ : ಸ್ವತಂತ್ರ ಹಾಗೂ ಸ್ವಾಭಿಮಾನ ಬೆಳೆಯಲು ಶಿಕ್ಷಣವೊಂದೇ ದಾರಿ ಎಂದು ಹೇಳಿದ ದಾರ್ಶನಿಕರು ಬ್ರಹ್ಮಶ್ರೀ ನಾರಾಯಣ ಗುರುಗಳು, ಅವರ ಸಂಘಟನೆಯ ಆದರ್ಶಗಳೊಂದಿಗೆ ಶಿವಗಿರಿ ಮಹಿಳಾ ಸಹಕಾರಿ ಸಂಘ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಭಾನುವಾರ ಮೆಲ್ಕಾರ್‌ನ ಬಿರ್ವ ಟರ‍್ಸ್ನಲ್ಲಿ ನೂತನವಾಗಿ ಸ್ಥಾಪನೆಗೊಂಡ ಶಿವಗಿರಿ ಮಹಿಳಾ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಚಿಂತನೆಯ ಆಶಯಗಳೊಂದಿಗೆ ಕಾರ್ಯನಿರ್ವಹಿಸುವ ಜಯಂತಿ ವಿ. ಪೂಜಾರಿಯವರ ಮುಂದಾಳತ್ವದಲ್ಲಿ ಸಂಘ ಮಹಿಳಾ ಸ್ನೇಹಿಯಾಗಿ ಎಲ್ಲಾ ವರ್ಗದ ಹಿತ ಕಾಯುವಂತಾಗಲಿ ಎಂದವರು ಆಶಯ ವ್ಯಕ್ತಪಡಿಸಿದರು.BTW_APL25_1ಉಪ್ಪಿನಂಗಡಿ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷೆ, ತಾ.ಪಂ.ಸದಸ್ಯೆ ಉಷಾ ಅಂಚನ್ ದೀಪ ಪ್ರಜ್ವಲಿಸಿ ಮಾತನಾಡಿ ಶಿವಗಿರಿ ಮಹಿಳಾ ಸಹಕಾರಿ ಸಂಘದ ಸ್ಥಾಪನೆ ಮೂಲಕ ಬಂಟ್ವಾಳ ತಾಲೂಕು ಅವಿಭಜಿತ ಜಿಲ್ಲೆಯಲ್ಲೊಂದು ಹೊಸ ಇತಿಹಾಸವನ್ನು ಬರೆದಿದ್ದು, ಇನ್ನೂ ಹೆಚ್ಚಿನ ಶಾಖೆಗಳ ರಚನೆಯಾಗಲಿ ಎಂದರು.

ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಸೇಫ್ ಲಾಕರ್ ಉದ್ಘಟಿಸಿದರು. ಸಂಘ ಸ್ಥಾಪನೆಗೆ ಸಹಕಾರ ನೀಡಿದ ತಾ.ಪಂ.ಸದಸ್ಯರಾದ ಸಂಜೀವ ಪೂಜಾರಿ ಬೊಳ್ಳಾಯಿ, ಜಿಲ್ಲಾ ಮೂರ್ತೆದಾರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್, ಗುರು ಕ್ರೆಡಿಟ್ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು.

ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬಂಟ್ವಾಳ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೇಬಿ ಕುಂದರ್, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್ ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್ , ಭುವನೇಶ್ ಪಚ್ಚಿನಡ್ಕ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಾಯತ್ರಿ, ಜಯಶಂಕರ್ ಕಾನ್ಸಲೆ, ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಕೊಲ್ಯ, ನಿರ್ದೇಶಕರಾದ ಅಭಿನಯ ಚಿದಾನಂದ, ಪುಷ್ಪಾವತಿ ಎಸ್, ತುಳಸಿ ಪುರಂದರ, ಪಲ್ಲವಿ ಪಿ., ಪ್ರಮಿಳಾ ಮನೋಜಗ್, ಪ್ರಮಿಳಾ ಹರೀಶ್, ಚಂದ್ರಾವತಿ, ವನಿತಾ, ರೋಹಿಣಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೇಖಾ ನವಿನ್ ಉಪಸ್ಥಿತರಿದ್ದರು.

ಶಿವಗಿರಿ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಜಯಂತಿ ಪೂಜಾರಿ, ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ೨೫ ಸ್ವಸಹಾಯ ಗುಂಪುಗಳನ್ನು ರಚಿಸಿ ಸಹಕಾರಿ ಬ್ಯಾಂಕ್ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂದರು. ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷೆ, ತಾ.ಪಂ.ಸದಸ್ಯೆ ಉಷಾ ಅಂಚನ್ ದೀಪ ಪ್ರಜ್ವಲಿಸಿ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter