Published On: Mon, Apr 26th, 2021

ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ 37ನೇ ವಷ೯ ಸಂಭ್ರಮಾಚರಣೆ ಸರಳವಾಗಿ ನಡೆಸಲ್ಪಟ್ಟ ಸಾಮೂಹಿಕ ವಿವಾಹ

ಬಂಟ್ವಾಳ:  ಇಲ್ಜಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ ಇದರ 37ನೇ ವಷ೯ ಸಂಭ್ರಮಾಚರಣೆ ಪ್ರಯುಕ್ತ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಭಾನುವಾರ ನಡೆದ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 16 ಜೋಡಿ  ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.  ಕೋವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ  ಸರಳವಾಗಿ ನಡೆದ ಮದುವೆಯಲ್ಲಿ ಸೀಮಿತ  ಜನರು ಸೇರಿದ್ದರು.   ತಲಾ 8 ಜೋಡಿಗಳಂತೆ ಎರಡು ಹಂತದಲ್ಲಿ  ಪ್ರತ್ಯೇಕ ಶುಭಮುಹೂರ್ತದಲ್ಲಿ  ವೇದಮೂತಿ೯ ಕೃಷ್ಣಭಟ್ ಕಾರ್ಕಳ, ಅಚ೯ಕ ವಿನಯ್ ನೇತೖತ್ವದ ತಂಡವು ವಿವಾಹ  ನೆರವೇರಿಸಿದರು. ಗುರಿಕಾರ ಗಿರೀಶ್ ಹೆಗ್ಗಡೆಬೈಲು, ಮೋಹನ್ ಆಚಾರ್ಯ ನೆಲ್ಲಿಗುಡ್ಡೆ ಇದ್ದರು. IMG_20210425_111710ಮೆರವಣಿಗೆ, ಪ್ರಶಸ್ತಿ ಪ್ರದಾನ ರದ್ದುಪ್ರತೀ ವಷ೯ದಂತೆ ವಿವಿಧ ಕಲಾತಂಡಗಳ ಜೊತೆಗೆ ನಡೆಯುವ ವಧು-ವರರ ವೈಭವದ  ದಿಬ್ಬಣ  ಮೆರವಣಿಗೆ, ಸಭಾ ಕಾರ್ಯಕ್ರಮ,  ಸಾಧಕರಿಗೆ ನೀಡುವ ‘ ಸ್ವಸ್ತಿ ಸಿರಿ’ ರಾಜ್ಯ ಪ್ರಶಸ್ತಿ  ಮತ್ತು ‘ಸ್ವಸ್ತಿಕ್ ಸಂಭ್ರಮ’ ಪುರಸ್ಕಾರ ಪ್ರದಾನ ರದ್ದುಗೊಳಿಸಲಾಗಿತ್ತು. ವಧು-ವರರು ಸೇರಿದಂತೆ ಅವರ ಕುಟುಂಬದ ತಲಾ ಐವರಿಗೆ ಮಾತ್ರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಮೊದಲ ಹಂತದ 8 ಜೋಡಿಯ ವಿವಾಹಕಾರ್ಯ ಪೂರ್ಣಗೊಂಡು ವಧುವರರು ಉಪಹಾರ ಸೇವಿಸಿ ತೆರಳಿದ ಬಳಿಕ ಎರಡನೇ ಹಂತದ ವಧು-ವರರನ್ನು ವಿವಾಹ ವೇದಿಕೆಗೆ ಕರೆತರಲಾಯಿತು.IMG_20210425_113827 ಕ್ಲಬ್ ನ ಸ್ಥಾಪಕಾಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ,  ಕಂಬಳದ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು, ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ, ಮಾಜಿ ಅಧ್ಯಕ್ಷೆ ಲಕ್ಷೀ ಜೆ.ಬಂಗೇರ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ, ಉದ್ಯಮಿ ಹೇಮಂತ್ ಕುಮಾರ್, ಉದಯಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ ಮಜಲೋಡಿ, ರಂಜಿತ್ ಎಚ್.ಡಿ, ಬಡಗಕಜೆಕಾರು ಗ್ರಾ.ಪಂ.ಸದಸ್ಯ ಸತೀಶ್ ಪೂಜಾರಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಲತೀಫ್, ಸಂಚಾಲಕ ರಾಜೇಶ್ ಪಿ.ಪುಂಜಾಲಕಟ್ಟೆ, ಮಾಧವ ಬಂಗೇರ, ಪ್ರಭಾಕರ ಪಿ.ಎಂ.,  ಪಿಡಿಒ ರಾಜಶೇಖರ್ ಇದ್ದರು.
ಆರೋಪ: ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಸಾಮೂಹಿಕ ವಿವಾಹ ಕಾಯ೯ಕ್ರಮ ಆಯೋಜಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter