ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯತ್ ಇಲಾಖೆಗೆ 10 ಕಂಪ್ಯೂಟರ್ಗಳನ್ನು ಇನ್ಪೋಸಿಸ್ ಕಂಪೆನಿ ಉಚಿತವಾಗಿ ನೀಡಿದೆ. ಇಲ್ಲಿನ ತಾಲೂಕು ಪಂಚಾಯತ್ನಲ್ಲಿ ಕೆಲಸ ಕಾರ್ಯಗಳು ನಿಧಾನವಾಘಿ ನಡೆಯುದಕ್ಕೆ ಕಂಪ್ಯೂಟರ್ ಕೊರತೆ ಇದೆ. ಹಾಗಾಗಿ ಉದ್ಯೋಗ ಖಾತರಿ ಯೋಜನೆಯ ಕೆಲಸಗಳು ಕೂಡ ಬಾಕಿ ಉಳಿದಿವೆ ಎಂದು ಇಲ್ಲಿನ ಅದಿಕಾರಿಗಳು ಪ್ರತಿಬಾರಿ ಕಾರಣ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ವಿಶೇಷವಾಗಿ ತಾ.ಪಂ.ಅಧ್ಯಕ್ಷ ಯಶವಂತ ಅವರ ಮುತುವಜರ್ಿಯಲ್ಲಿ ಇನ್ಪೋಸಿಸ್ ಕಂಪೆನಿಗೆ ಮನವಿ ಮಾಡಿದ್ದರು. ಇಲ್ಲಿನ ಸಮಸ್ಯೆಯ ಬಗ್ಗೆ ವಿಶ್ಲೇಷಿಸಿ 10 ಕಂಪ್ಯೂಟರ್ನ್ನು ತಾ.ಪಂ.ಗೆ ನೀಡಿದೆ. ಈ ಸಂದರ್ಭ ತಾ.ಪಂ ಅಧ್ಯಕ್ಷ ಯಶವಂತ, ಉಪಾಧ್ಯಕ್ಷೆ ವಿಲಾಸಿನಿ, ಮಾಜಿ ಉಪಾಧ್ಯಕ್ಷರುಗಳಾದ ಆನಂದ ಎ.ಶಂಭೂರು, ದಿನೇಶ್ ಅಮ್ಟೂರು ಮತ್ತು ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು.


