ಸುದ್ದಿ9ಬಂಟ್ವಾಳ; ತುಂಬೆ ವೆಂಟೆಡ್ ಡ್ಯಾಮ್ ಸಮೀಪ ಗುರುವಾರ ಬೆಳಿಗ್ಗೆ ಅಪರಿಚಿತ ಶವ ಪತ್ತೆಯಾಗಿದೆ. ಸ್ಥಳೀಯರು ಶವ ಕಂಡು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿನೀಡಿದ್ದಾರೆ. ಇದರನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ರಕ್ಷಿತ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ನೂತನ ವೆಂಟೆಡ್ ಡ್ಯಾಂ ನಿಮರ್ಾಣಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಶವ ಪತ್ತೆಯಾಗಿದ್ದು, ಶವ ಮೇಲೆತ್ತಲು ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಲಾಗಿದ್ದು, ಸಾರ್ವಜನಿಕರ ನೆರವಿನೊಂದಿಗೆ ಶವವನ್ನು ಅಗ್ನಿಶಾಮಕದಳದ ಬೋಟ್ ಮೂಲಕ ನದಿಯಿಂದ ತೆರವುಗೊಳಿಸಿ,ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಘಟನಾ ಸ್ಥಳಕ್ಕೆ ಆಗಮಿಸಿ, ಮುಂದಿನ ಕ್ರಮದ ಕುರಿತು ಪೊಲೀಸರಿಗೆ ಸೂಚನೆ ನೀಡಿದರು. ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು, ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ, ಮಾಜಿ ತಾ.ಪಂ.ಸದಸ್ಯ ಪ್ರವೀಣ್ ಆಳ್ವ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿಶಾಮಕ ಅಧಿಕಾರಿ ತರಾಟೆಗೆ..
ತುಂಬೆ ವೆಂಟೆಡ್ ಡ್ಯಾಂ ಬಂಟ್ವಾಳ ತಾಲೂಕಿಗೆ ಸೇರಿದ್ದು, ಇಲ್ಲಿನ ಅಪರಿಚಿತ ಶವ ಮೇಲೆತ್ತಲು ಬಂಟ್ವಾಳದ ಅಗ್ನಿಶಾಮಕದಳವೇ ಬರಲಿ ಎಂದು ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹೇಳಿದ್ದಾರೆಂಬ ವಿಚಾರ ಪೊಲೀಸ್ ಅಧಿಕಾರಿಗಳನ್ನು ಕೆರಳಿಸಿತು. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಪೊಲೀಸ್ ಇಲಾಖೆಯಲ್ಲಿ ಬೋಟ್ ಇಲ್ಲ, ಇದ್ದರೆ ಅದನ್ನೂ ನಾವೇ ಮಾಡ್ತೇವೆ, ಎರಡೂ ಇಲಾಖೆಗಳೂ ಸಾರ್ವಜನಿಕ ಕೆಲಸಕ್ಕೆ ಇರುವಂತಾದ್ದು, ಇಂತಹಾ ಸಂದರ್ಭದಲ್ಲೂ ವ್ಯಾಪ್ತಿ ವ್ಯಾಪ್ತಿ ಅಂತ ಯಾಕೆ ಹೇಳ್ತೀರಿ ಎಂದು ವಿವರ ಕೇಳಿದರು. ಇದಕ್ಕೆ ಸಮಜಾಯಿಷಿಕೆ ನೀಡಿದ ಅಧಿಕಾರಿ, ನಾವು ಆ ಅರ್ಥದಲ್ಲಿ ಹೇಳಿದ್ದಲ್ಲ, ನಮ್ಮೊಂದಿಗೆ ನೆರವಿಗೆ ಜನಬೇಕೆಂದು ಹೇಳಿದ್ದೇವಷ್ಟೇ ಎಂದು ಹೇಳಿ ಜಾರಿಕೊಂಡರು. ಬಳಿಕ ಅಗ್ನಿಶಾಮಕದಳದವರ ನೇತೃತ್ವದಲ್ಲಿ ಪೊಲೀರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಶವವನ್ನು ನದಿಯಿಂದ ಮೇಲೆತ್ತಲಾಯಿತು.

By Suddi9

Leave a Reply

Your email address will not be published. Required fields are marked *