ಮೂಡುಬಿದಿರೆ ಸಮಾಜ ಮಂದಿರದ ಮೀಟಿಂಗ್ ಹಾಲ್‍ನಲ್ಲಿ ದ.ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ, ಮೂಡುಬಿದಿರೆ ವಲಯ, ಭಂಡಾರಿ ಸಮಾಜ ಸೇವಾ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಭಾನುವಾರ ಏರ್ಪಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.313bea37-9983-4afa-badb-6d5da1e5f18a

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಶಶಿಕಲಾ ಹೇಳಿದರು ಉದ್ಘಾಟಿಸಿ,ಕಳೆದ ಬಾರಿ ಕೊರೊನಾದಿಂದ ನಾವೆಲ್ಲರೂ ಕಂಗೆಟ್ಟಿದ್ದೆವು. ಇಂಥ ಕೊರೊನಾದ ಹಿಂದೆ ಬಿದ್ದು ಇತರ ರೋಗಗಳ ಬಗ್ಗೆ ಕಾಳಜಿ ವಹಿಸಿದ್ದು ಕಡಿಮೆಯಾದ ಹಾಗೆ ತೋರಿದೆ. ಆಗ ಕೊರೊನಾದ ಲಸಿಕೆಯೂ ಸಿದ್ದವಾಗಿದ್ದಿರಲಿಲ್ಲ. ಈಗ ಎಲ್ಲವೂ ಸಿದ್ಧ. 45 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಮ್ಮ ಆಧಾರ್ ಕಾರ್ಡ್, ಮೊಬೈಲದ ಸಹಿತ ಬಂದು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಮಾಸ್ಕ್ ಧಾರಣೆಯೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಆಗಾಗ ಕೈಗಳನ್ನು ತೊಳೆದುಕೊಳ್ಳುವುದನ್ನು ಜನರು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಮೂಡುಬಿದಿರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.ಯೆನೆಪೋಯ ಕಾಲೇಜ್‍ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ.ಶರತ್‍ಚಂದ್ರ, ಆಸ್ಪತ್ರೆಯ ಡಾ.ಅಝೀಝ್, ಯೆನೆಪೋಯ ಕಾಲೇಜು ಆಸ್ಪತ್ರೆಯ ಯೋಗ ಥೆರಪಿಸ್ಟ್ , ಜ್ಯೂನಿಯರ್ ಸಂಶೋಧನ ವಿದ್ಯಾರ್ಥಿ ಕುಶಾಲಪ್ಪ ಗೌಡ, ಗ್ಯಾರೇಜ್ ಮಾಲಕರ ಸಂಘದ ವಲಯ ಅಧ್ಯಕ್ಷ ಗುರುಪ್ರಸಾದ್ ಎಂ., ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಎನ್.ಪ್ರಕಾಶ್ ಭಂಡಾರಿ
ಉಪಸ್ಥಿತರಿದ್ದರು.

ಯೆನೆಪೋಯ ಕಾಲೇಜು ಆಸ್ಪತ್ರೆಯ 29 ಮಂದಿ ವೈದ್ಯಕೀಯ ಸಿಬಂದಿಗಳು ವಿಶೇಷ ದಂತ ಚಿಕಿತ್ಸಾ ಮೊಬೈಲ್ ಘಟಕ ಮತ್ತು ಇತರ ವ್ಯವಸ್ಥೆಗಳೊಂದಿಗೆ ನಡೆಸಿಕೊಟ್ಟ ಉಚಿತ ಆರೋಗ್ಯ ಶಿಬಿರದಲ್ಲಿ ಒಟ್ಟು 178 ಮಂದಿ ಪಾಲ್ಗೊಂಡಿದ್ದು ಜನರಲ್ ಮೆಡಿಸಿನ್‍ನಲ್ಲಿ 106, ದಂತ ಚಿಕಿತ್ಸಾ ವಿಭಾಗದಲ್ಲಿ 36 ಮಂದಿ ಹಾಗೂ ರಕ್ತದಾನಿಗಳಾಗಿ 36 ಮಂದಿ ಭಾಗವಹಿಸಿದ್ದರು. ಸೌಮ್ಯ ಕೋಟ್ಯಾನ್ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *