ಮೂಡುಬಿದಿರೆ: ಮೂಡುಬಿದಿರೆ ಅಂಚೆ ಪಾಲಕರಾಗಿ ಮೂರು ವರ್ಷಗಳು ಸೇವೆ ಸಲ್ಲಿಸಿ ಪದೋನ್ನತಿಗೊಂಡು ಉಡುಪಿ ಅಂಚೆ ಕಚೇರಿಗೆ ಪ್ರಧಾನ ಅಂಚೆ ಪಾಲಕರಾಗಿ ವರ್ಗಾವಣೆಗೊಂಡ ಗುರುಪ್ರಸಾದ್ ಅವರಿಗೆ ಅಂಚೆ ಮನೋರಂಜನಾ ಕೂಟ ಮೂಡುಬಿದಿರೆ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಸಮಾಜಮಂದಿರದಲ್ಲಿ ಆಯೋಜಿಸಲಾಯಿತು.WhatsApp Image 2021-04-14 at 3.04.17 PM
ಬಂಟ್ವಾಳ ಉಪವಿಭಾಗ ಸಹಾಯಕ ಅಂಚೆ ಅಧೀಕ್ಷಕ ಲೋಕನಾಥ್ ಎಂ. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಮೂಡುಬಿದಿರೆ ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಅನುಭವ, ಸರಳತೆಯ, ಗ್ರಾಹಕ ಸ್ನೇಹಿ ಸೇವೆ ನೀಡುವ ಅಧಿಕಾರಿ ಹೇಗೆ ಇರಬೇಕು ಎನ್ನುವುದಕ್ಕೆ ಗುರುಪ್ರಸಾದ್ ಅವರು ಮಾದರಿ. ಮೂಡುಬಿದಿರೆಯ ಗ್ರಾಹಕರು, ಅವರ ಸಿಬ್ಬಂದಿಗಳು ನೀಡುವ ಗೌರವದಿಂದ ಅವರೊಬ್ಬ ಸಮರ್ಥ ಅಧಿಕಾರಿ ಎನ್ನುವುದು ತಿಳಿಯುತ್ತದೆ. ಅಂಚೆ ಇಲಾಖೆ ಈಗಾಲೂ ಜನರು ವಿಶ್ವಾಸದಿಂದ ನೋಡುವ ಇಲಾಖೆ. ಪ್ರಾಮಾಣಿಕವಾಗಿ ಅಧಿಕಾರಿ, ಸಿಬ್ಬಂದಿಗಳು ಗ್ರಾಹಕರಿಗೆ ಸೇವೆ ನೀಡಿದರೆ ಜನರು ಜನರು ಇಲಾಖೆಗೆ ಮತ್ತಷ್ಟು ಆಪ್ತರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆ ಅಂಚೆ ಕಚೇರಿಯ ಹಿರಿಯ ಅಂಚೆ ಸಹಾಯಕಿ ಮೀನಾಕ್ಷಿ ಅವರು ಬರೆದ `ಸಂಕ್ರಾಂತಿ’ ತುಳು ಕವನ ಸಂಕಲನವನ್ನು ಸಾಹಿತಿ ಸದಾನಂದ ನಾರಾವಿ ಬಿಡುಗಡೆಗೊಳಿಸಿದರು. ತುಳು ಸಾಹಿತಿ ಜಯಂತಿ ಎಸ್. ಬಂಗೇರ ಮುಖ್ಯ ಅತಿಥಿಯಾಗಿದ್ದರು.

By Suddi9

Leave a Reply

Your email address will not be published. Required fields are marked *