Published On: Fri, Apr 16th, 2021

ಉಡುಪಿ ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಕೋವಿಡ್ ಲಸಿಕಾ ಅಭಿಯಾನ

ಉಡುಪಿ : ಉಡುಪಿ ಇಲ್ಲಿನ ಬಂಟಕಲ್ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎ.15 ರಂದು ಗುರುವಾರ ಕೋವಿಡ್ ವಿರುದ್ಧದ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡರು. ಸಂಸ್ಥೆಯ ವಿದ್ಯಾರ್ಥಿಗಳು ಶಂಕರಪುರ, ಬಂಟಕಲ್ ಕಾಲೇಜಿನ ಆಸುಪಾಸು ಹಾಗೂ ಉಡುಪಿ ಜಿಲ್ಲೆಯಗ್ರಾಮಾಂತರ ಪ್ರದೇಶಗಳಿಗೆ ತೆರಳಿ, ಅಲ್ಲಿ ೪೫ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ತೆಗೆದುಕೊಳ್ಳುವುದರಿಂದ ಆಗುವ ಉಪಯೋಗಗಳನ್ನು ವಿವರಿಸಿ, ಅವರುಗಳಲ್ಲಿ ಜನಜಾಗೃತಿ ಉಂಟುಮಾಡಿ ಲಸಿಕೆ ಪಡೆಯಲು ಜನರಲ್ಲಿ ಇರುವ ಹಿಂಜರಿಕೆ ದೂರ ಮಾಡಿ, ಅಧಿಕ ಮಂದಿ ಲಸಿಕೆ ಹಾಕುವಂತೆ ಉತ್ತೇಜಿಸಿದರು.IMG-20210412-WA0010ಎಪ್ರಿಲ್ ೧೧ ಜ್ಯೋತಿಭಾ ಫುಲೆ ಜನ್ಮದಿನದಂದು ಮಹಿಳೆಯರಿಗೆ ಲಸಿಕೆ ತೆಗೆದು ಕೊಳ್ಳುವಂತೆ ವಿದ್ಯಾರ್ಥಿಗಳು ಪ್ರೇರೆಪಿಸಿದರು. ಹಾಗೆಯೇ ಎಪ್ರಿಲ್ ೧೪ರಂದು ಡಾ| ಅಂಬೇಡ್ಕರ್ ಜಯಂತಿ ದಿನ ಯುವಜನತೆ, ಶೋಷಿತ ವರ್ಗಗಳು ಹಾಗೂ ಕಾನೂನು ವಲಯದ ವೃತ್ತಿಪರರಿಗೆ ಲಸಿಕೆ ತೆಗೆದು ಕೊಳ್ಳುವಂತೆ ಉತ್ತೇಜಿಸಿ ಮಹಾತ್ಮರ ಜನ್ಮದಿನಾಚರಣೆಗಳನ್ನು ಅರ್ಥಗರ್ಭಿತ ರೀತಿಯಲ್ಲಿ ಅಭಿಯಾನ ನಡೆಸಿದರು. ಕೇಂದ್ರ, ರಾಜ್ಯ ಸರಕಾರ ಹಾಗೂ ವಿಶ್ವವಿದ್ಯಾನಿಲಯದ ಮಾರ್ಗದರ್ಶನದಂತೆ ಈ ಅಭಿಯಾನ ಕೈಗೊಂಡರು.

IMG-20210412-WA0020ರಾಷ್ಟ್ರೀಯ ಸೇವಾ ಘಟಕದ ಮುಖ್ಯಸ್ಥರಾದ ನಾಗರಾಜ್ ರಾವ್ ಅವರು ಅಭಿಯಾನವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಗಣೇಶ್ ಶೆಟ್ಟಿ, ರಮ್ಯಶ್ರೀ, ಮಧುಕರ್ ನಾಯಕ್, ನಿಶಾ ರೀನಾ ನಜರತ್, ಮಧುಸೂನ ರಾವ್ ಅವರು ಈ ಅಭಿಯಾನದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪ್ರೊತ್ಸಾಹಿಸಿದರು.IMG-20210412-WA0024

IMG-20210412-WA0034

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter