ಮುಂಜಾನೆಯ ಸೂರ್ಯನ ರಶ್ಮಿಗೆ ಫಳಫಳ ಹೊಳೆಯುವ ಜರತಾರಿ ಸೀರೆಯನ್ನು ಹಾಸಿದಂತೆ ಕಾಣುವ ಇವುಗಳು ಅಸಲಿಗೆ ಸಾರಿಗಳಲ್ಲ. ಜೇಡರಬಲೆಗಳು. ಜೇಡಗಳು ಕಲಾತ್ಮಕವಾಗಿ ಬಲೆ ಹೆಣೆದು ಪೊದೆಯ ಮೇಲೆ ಸಿಕ್ಕಿಸಿಕೊಂಡಿರುತ್ತದೆ. ಇವುಗಳು ಬೆಳಗ್ಗಿನ ತುಂತುರಿಗೆ ಲಲನೆಯರು ತನ್ನ ಬೆಳ್ಳಿಯಂಚಿನ ಜರತಾರಿ ಸೀರೆಯನ್ನು ಹಾಸಿಕೊಂಡಂತೆ ಕಾಣುತ್ತದೆ, ತುಂತುರಿನ ಮಳೆ ನೀರು ಮುತ್ತಿನಂತೆ ಕಾಣುತ್ತದೆ

bale 10

bale1

bale 2

bale 3

bale 4

bale 5

bale 6

bale 8

bale 9

 
ಜೇಡಗಳು ಪೊದೆಯಂಚಿನಲ್ಲಿ ಈ ರೀತಿ ಬಲೆಹೆಣೆದುಕೊಂಡಿರುತ್ತದೆ. ಪೊದೆಗಳಲ್ಲಿ ಗಿಡಗಳ ಗೆಲ್ಲುಗಳ ಸಣ್ಣ ಸಣ್ಣ ಕಡ್ಡಿಗಳನ್ನು ತನಗೆ ಬೇಕಾದಂತೆ ಅಳತೆಮಾಡಿಕೊಂಡು ವಿವಿಧ ವಿನ್ಯಾಸದ ಬಲೆ ಹೆಣೆದುಕೊಳ್ಳುತ್ತದೆ, ನೆಲದ, ಮರದ ಗೆಲ್ಲು ಹೀಗೆ ತನಗೆ ಬೇಕಾದ ರೀತಿಯ ವಿನ್ಯಾಸದ ಬಲೆ ಸಿದ್ಧವಾಗಿರುತ್ತದೆ.
ಈ ರೀತಿಯ ಬಲೆಗಳನ್ನು ಜೇಡಗಳು ಸಂಜೆಯವೇಳೆಗೆ ಸಿದ್ಧಪಡಿಸುತ್ತದೆ. ಈ ಜೇಡಗಳೂ ಸಹ ಅಷ್ಟೆ ಸಣ್ಣ ಜೇಡಗಳು, ಇವುಗಳು ಸಿದ್ಧಪಡಿಸಿದ ಬಲೆಗಳು ಸಾಮಾನ್ಯವಾಗಿ ಹಗಲಲ್ಲಿ ಕಾಣಿಸುವುದಿಲ್ಲ, ಯಾಕೆಂದರೆ ಕನ್ನಡಿಯಂತೆ ಪಾರದರ್ಶಕವಾಗಿರುತ್ತದೆ. ಇವುಗಳು ಬೇರೆ ಸಣ್ಣಸಣ್ಣಕೀಟಗಳಿಗೆ ಕಾಣಿಸದೆ ಅದರೊಳಗಡೆ ಬಂಧಿಯಾಗಿಬಿಡುತ್ತದೆ. ಇವುಗಳನ್ನು ತನ್ನ ಬಲೆಯೊಳಗಡೆ ಸೆಳೆದುಬಿಡುವ ಜೇಡಗಳಿಗೆ ಮುಂದಿನ ಆಹಾರ. ಈ ಬಲೆಗಳಲ್ಲಿ ಸಣ್ಣಸಣ್ಣ ಜೇಡನ ಮರಿಗಳನ್ನೂ ಸಹ ಕಾಣಬಹುದು.
ಬೆಳಗ್ಗಿನ ತುಂತುರು ನೀರಿನ ಹನಿ ಜೇಡನ ಬಲೆಗೆ ಬೀಳುತ್ತವೇನೋ ನಿಜ. ಆದರೆ ಇದರಿಂದ ಒಳಗಿರುವ ಜೇಡಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಯಾಕೆಂದರೆ ನೀರು ಒಳಗಡೆ ಪ್ರವಹಿಸಲು ಬಲೆ ಬಿಡುವುದಿಲ್ಲ. ಅಲ್ಲದೆ ಬಿಸಿಲು, ಗಾಳಿ, ಧೂಳಿನಿಂದ ರಕ್ಷಣೆ ನೀಡುತ್ತದೆ. ಇದರ ಮೇಲೆ ಮುತ್ತಿನಂತಿರುವ ನೀರುಗಳು ಸೂರ್ಯನ ಶಾಖ ಅಧಿಕವಾಗುತ್ತಿದ್ದಂತೆ ತನ್ನಷ್ಟಕ್ಕೆ ಆವಿಯಾಗುತ್ತದೆ. ಆಮೇಲೆ ಈ ಬಲೆಗಳು ಮತ್ತೆ ಅದೃಶ್ಯವಾಗುತ್ತದೆ. ಈ ಬಲೆಗಳ ಸೌಂದರ್ಯವನ್ನು ಸವಿಯಬೇಕಿದ್ದರೆ ಬೆಳಗ್ಗಿನ ಸೋಯರ್ೋದಯದ ಸಮಯ ಸೂಕ್ತ.
-ಗಿರೀಶ್ ಮಳಲಿ

 

By suddi9

Leave a Reply

Your email address will not be published. Required fields are marked *