ಮುಂಬಯಿ : ಬೃಹನ್ಮುಂಬಯಿ ಇಲ್ಲಿನ ಹಿರಿಯ ಮತ್ತು ಪ್ರಸಿದ್ಧ ಹೊಟೇಲು ಉದ್ಯಮಿ ರತ್ನಾಕರ್ ಬಿ.ಹೆಗ್ಡೆ ಪೆರ್ಡೂರು (೬೬.) ಅಲ್ಪಾವಧಿಯ ಅಸ್ವಸ್ಥತೆಯಿಂದ ಇಂದಿಲ್ಲಿ ಎ.೧೦ ರಂದು ಶನಿವಾರ ಮಲಾಡ್ ಪಶ್ಚಿಮದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.Ratnakar B. Hegde Andheri (B)ಮೂಲತಃ ಉಡುಪಿ ಜಿಲ್ಲೆಯ ಪೆರ್ಡೂರು ಇಲ್ಲಿನ ಪಡಿಗರ ಮಾತೃಕೃಪಾ ಮನೆತನದ ಮೃತರು ಮುಂಬಯಿನಲ್ಲಿ ಹೊಟೇಲು ಉದ್ಯಮದಲ್ಲಿ ಗಣನೀಯ ಹಾಗೂ ಸಾಧನೀಯ ಸೇವೆ ಸಲ್ಲಿಸಿ ಮೆಟ್ರೋ ಹೊಟೇಲು ಸಮೂಹದ ಮಾಲೀಕರಾಗಿದ್ದು ಅಂಧೇರಿ, ದಹಿಸರ್ ಮತ್ತು ಪನ್ವೇಲ್ ಇಲ್ಲಿ ಹೊಟೇಲುಗಳನ್ನು ಹೊಂದಿದ್ದರು.

ಅಂಧೇರಿ ಪಶ್ಚಿಮ ಲೋಖಂಡ್‌ವಾಲಾ ನಿವಾಸಿ ಆಗಿದ್ದು ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಇವರು ಓರ್ವ ಕೊಡುಗೈದಾನಿ, ಸಮಾಜ ಸೇವಕರೆಣಿಸಿ ಜನಾನುರೆಸಿದ್ದರು. ಮೃತರು ಪತ್ನಿ ಮೂವರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *