ಕೈಕಂಬ : ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವು ಗ್ರಾಮದ ಕೊಂದೋಡಿ ನಿವಾಸಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಯುವಕ ಸತೀಶ್ ನಾಯ್ಕ್(೩೦) ಎಂಬವರಿಗೆ ಎ. ೨೯ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಚಿಕಿತ್ಸೆಗೆ ೭ ಲಕ್ಷ ರೂ ಖರ್ಚಾಗಲಿದೆ. ಬದುಕಿದರೆ ಸಮಾಜಜೀವಿಯಾಗಿ ಬದುಕಬೇಕೆಂದು ಇಚ್ಚಿಸಿರುವ ಇವರಿಗೆ ಈಗ ಸಮಾಜದ ಬೆಂಬಲ ಅಗತ್ಯವಿದೆ. ಚಿಕಿತ್ಸೆಯ ಮೊತ್ತ ಹಗುರಗೊಳಿಸುವಲ್ಲಿ ಸಹೃದಯಿಗಳು ಮುಂದೆ ಬರುವರೆಂಬ ನಿರೀಕ್ಷೆಯಲ್ಲಿದ್ದಾರೆ ಸತೀಶ್ ಮತ್ತವರ ಕುಟುಂಬ.gur-apl-9-sathish naikಕಿಡ್ನಿ ವೈಫಲ್ಯದಿಂದ ಮಾನಸಿಕವಾಗಿ ಕುಗ್ಗಿರುವ ತನ್ನ ಪುತ್ರನಿಗೆ ತಂದೆ ಅಣ್ಣು ನಾಯ್ಕ್ ಆಸರೆಯಾಗಿದ್ದಾರೆ. ಅಂದರೆ, ಕುಟುಂಬಕ್ಕೆ ಆಸರೆಯಾಗಿರುವ ಪುತ್ರನಿಗೆ ಈಗ ತಂದೆಯೇ ತನ್ನ ಒಂದು ಕಿಡ್ನಿ ದಾನ ಮಾಡುತ್ತಿದ್ದಾರೆ. ಇನ್ನಷ್ಟು ಕಾಲ ಬದುಕಬೇಕೆನ್ನುವ ಸತೀಶ್ ಆಸೆಗೆ ತಾಯಿಯ ಪ್ರೀತಿ ಸ್ಪೂರ್ತಿಯಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ನಡೆಯುತ್ತಿದ್ದು, ಡಾ. ರಾಘವೇಂದ್ರ ನಾಯಕ್ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) ಈಗಾಗಲೇ ಒಂದು ಲಕ್ಷ ರೂ ಸಂಗ್ರಹಿಸಿ ಒದಗಿಸಿದೆ.

ಇವರ ಚಿಕಿತ್ಸೆಗೆ ಮಾನವೀಯ ನೆಲೆಯಲ್ಲಿ ನೆರವಾಗುವ ಬಂಧುಗಳು ಬಡಗ ಎಡಪದವಿನಲ್ಲಿರುವ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ತೆರೆಯಲಾಗಿರುವ ಖಾತೆಗೆ ಹಣ ಜಮಾಯಿಸಬಹುದು. ಸತೀಶ್ ನಾಯ್ಕ್, ಖಾತೆ ಸಂಖ್ಯೆ : ೬೦೬೩೧೨೪೨೪, ಐಎಫ್‌ಎಸ್‌ಸಿ : ಐಡಿಐಬಿ೦೦೦ಬಿ೧೪೪. ಮೊಬೈಲ್ : ೯೬೩೨೩೭೬೭೬೫

By Suddi9

Leave a Reply

Your email address will not be published. Required fields are marked *