ಸುದ್ದಿ9 ಕೈಕಂಬ : ವಾಮಂಜೂರು ಸಂತ ಜೋಸೆಫ್ ದೇವಾಲಯದ ಕಥೋಲಿಕ್ ಸಭೆಯ 18 ನೇ ವಾರ್ಷಿಕೋತ್ಸವವು ಅ.19ರಂದು ವಾಮಂಜೂರು ಕಥೋಲಿಕ್ ಸಭಾಭವನದಲ್ಲಿ ಜರಗಿತು.
ಪ್ರಧಾನ ಧರ್ಮ ಗುರುಗಳಾದ ವಂದನೀಯ ಫಾ/ಸಿಪ್ರಿಯನ್ ಪಿಂಟೋ ಹಾಗೂ ಸಹಾಯಕಧರ್ಮಗುರುಗಳಾದ ವಂದನೀಯ ಗುರು ಮೆಲ್ವಿನ್ ಡಿ”ಸೋಜ ಪ್ರಾರ್ಥನಾ ವಿದಿಯನ್ನು ಬೋದಿಸಿದರು . ಸಭೆಯಲ್ಲಿ ಮಂಗಳೂರು ಕಥೋಲಿಕ್ ಕೇಂದ್ರದ ಅಧ್ಯಕ್ಷೆ ಫ್ಲೇವಿ ಡಿ:ಸೋಜ ಅವರನ್ನು ಧರ್ಮಗುರುಗಳಾದ ಸಿಪ್ರ್ರಿಯನ್ ಪಿಂಟೋರವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಥೋಲಿಕ್ ಸಭಾ ಕೇಂದ್ರಕ್ಕೆ 38 ವರ್ಷಗಳಾಗಿದ್ದು ಫ್ಲೇವಿ ಡಿ”ಸೋಜಾರವರು ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ವಾಮಂಜೂರು ಕಥೋಲಿಕ್ ಸಭೆಯಲ್ಲಿ ಸನ್ಮಾನಿಸಿ ಕಥೋಲಿಕ್ನ ಕಾರ್ಯಕ್ರಮವನ್ನುಅಭಿನಂದಿಸಿದರು. ಕಥೋಲಿಕ್ನ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕಥೋಲಿಕ್ನ ಕಾರ್ಯಕರ್ತರಿಗೆ ಸಭೆಯಲ್ಲಿ ಗುರುತು ಚೀಟಿಯನ್ನು ಡೆನಿಸ್ ಡಿ”ಸೋಜ ಅವರು ತಯಾರಿಸಿ ಎಲ್ಲಾ ಸದಸ್ಯರಿಗೆ ನೀಡಿ ಶುಭ ಹಾರ್ಯಸಿದರು.
ವೇದಿಕೆಯಲ್ಲಿ ನೀರ್ಮಾರ್ಗ ಗ್ರಾಮ ಪಂ.ಸದಸ್ಯ ವಿಲ್ಫ್ರಡ್ ಕ್ರಾಸ್ತಾ, ಪಾಲನಾ ಮಂಡಳಿಯ ಉಪಾದ್ಯಕ್ಷ ರೋಶನ್ ಕಾಮತ್ ಮತ್ತು ಕಾರ್ಯದರ್ಶಿ ಜೋಕಿಂ ಡಿ”ಸೋಜ, ಕಥೋಲಿಕ್ ಸಭೆಯ ಮಾಜಿ ಅಧ್ಯಕ್ಷೆ ಅಸುಂತಾ ಕ್ರಾಸ್ತಾ ಉಪಸ್ಥಿತರಿದ್ದರು. ಅಧ್ಯಕ್ಷ ಮಾರ್ಟನ್ ಆರ್.ಡಿ”ಸೋಜಾ,ಸ್ವಾಗತಿಸಿ. ಕಾರ್ಯದಲ ಶೇತಲ್ ಫೆನರ್ಾಂಡಿಸ್ ವಾಷರ್ಿಕ ವರದಿ ಮಂಡಿಸಿದರು.ಸಹಕಾರ್ಯದಶರ್ಿ ಮೋಲಿ ಕುವೆಲ್ಲೊ ವಂದಿಸಿ .ವಿಶಾಂತ ಮಾರ್ಕ ಡಿ”ಸೋಜ ಕಾರ್ಯಕ್ರಮ ನಿರೂಪಿಸಿದರು.





