ಬೆಳ್ತಂಗಡಿ : ದೇಹದ ಪ್ರತಿಯೊಂದು ಭಾಗವೂ ನಮ್ಮ ಆಸ್ತಿ ಇದ್ದಂತೆ ಅದನ್ನು ದೇವರು ಕೊಟ್ಟ ಕಣ್ಣು ಎಂಬುದು ಪ್ರತಿಯೊಬ್ಬರ ನೋವು ನಲಿವನ್ನು ಕಾಣಲು ಕೊಟ್ಟ ಕೊಡುಗೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.ಅವರು ಭಾನುವಾರ ನಾಗರಿಕಾ ಸೇವಾ ಸಮಿತಿ (ರಿ) ಗುರುವಾಯನಕೆರೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮತ್ತು ಮಹಮ್ಮಾಯಿ ಸೇವಾ ಸಮಿತಿ ಪುತ್ರಬೈಲು ಲೈಲ ಇದರ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಕಲಾ ಭವನ ಬೆಳ್ತಂಗಡಿಯಲ್ಲಿ ಮಾರ್ಚ್ 28 ರಂದು ನಡೆದ ಕಣ್ಣಿನ ಉಚಿತ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂತಹ ಶಿಬಿರಗಳು ಜನಸಾಮಾನ್ಯರಿಗೆ ಉಪಯುಕ್ತವಾಗಿದೆ ಎಂದರು.WhatsApp Image 2021-03-28 at 6.52.00 PM

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರ ಬೈರ ಮತನಾಡಿ ದೇವರ ಸೇವೆ ಮಾಡುತ್ತಿರುವವರಿಗೆ ದೇವರ ಅನುಗ್ರಹವಿದೆ. ಪ್ರತಿಯೊಬ್ಬರೂ ದೇವರ ಸೇವೆಯೊಂದಿಗೆ ಸಮಾಜದ ಸೇವೆ ಮಾಡುವವರನ್ನು ಗೌರವಿಸಬೇಕು. ಭಗವಂತ ಇಂತಹವರಿಗೆ ಮಾತ್ರ ಶಕ್ತಿಯನ್ನು ನೀಡುತ್ತಾನೆ ಎಂದರು. ಕಾರ್ಯಕ್ರಮದಲ್ಲಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ನಿರ್ದೇಶಕ ಎಂ ಜನಾರ್ಧನ್, ಮೆಡಿಕಲ್ ಸುಪರಿಡೆಂಟ್ ಡಾ| ಕಾಶಿನಾಥ್ ಶೆಣೈ, ನಾಗರಿಕಾ ಸೇವಾ ಸಮಿತಿ (ರಿ) ಗುರುವಾಯನಕೆರೆ ಇದರ ಅಧ್ಯಕ್ಷ ಸುಕೇಶ್ ಕಡಂಬು, ಬೆಳ್ತಂಗಡಿ ನ.ಪಂ ಅಧ್ಯಕ್ಷೆ ರಜನಿ ಕುಡ್ವ, ಕಳಿಯ ಗ್ರಾ.ಪಂ ಅಧ್ಯಕ್ಷೆ ಸುಹಾಸಿನಿ,. ಮೆಲಂತಬೆಟ್ಟು ಗ್ರಾ.ಪಂ ಅಧ್ಯಕ್ಷೆ ಹರಿಣಾಕ್ಷಿ, ನಿವೃತ್ತ ಎಸ್‌ಪಿ ಪಿತಾಂಬರ ಹೆರಾಜೆ, ಕೊಯ್ಯೂರು ಗ್ರಾ.ಪಂ ಅಧ್ಯಕ್ಷ ಜಗನ್ನಾಥ್ ಎಂ, ಲೈಲ  ಗ್ರಾ.ಪಂ ಅಧ್ಯಕ್ಷೆ ಆಶಾ ಬೆನಡಿಕ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪೈಸ್ ಉಪಸ್ಥಿತರಿದ್ದರು.

ಸುಕೇಶ್ ಕಡಂಬು ಸ್ವಾಗತಿಸಿ, ರಾಜಶ್ರೀ ಹೆಗ್ಡೆ ವಂದಿಸಿದರು. ಪೃಥ್ವೀಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಒಟ್ಟು ೭೦೧ ಫಲಾನುಭವಿಗಳು ನೊಂದಾಯಿಸಿ ಪ್ರಯೋಜನೆ ಪಡೆದುಕೊಂಡರು

By suddi9

Leave a Reply

Your email address will not be published. Required fields are marked *