ದೆಹಲಿ: ಸೋಮವಾರ ರಾತ್ರಿ ಸಚಿವರ ಜೊತೆ ನಡೆಸಿದ ಭೋಜನ ಕೂಟದಲ್ಲಿ, ಸದರಿ ವಿಚಾರಣೆಗೊಳಪಟ್ಟಿರುವ, ವಿದೇಶದಲ್ಲಿ ಬಚ್ಚಿಟ್ಟಿರುವ ಕಪ್ಪುಹಣದ ಒಡೆಯರ ಕೆಲವರ ಹೆಸರನ್ನು ದೀಪಾವಳಿಯ ನಂತರ ಸುಪ್ರೀಂ ಕೊರ್ಟುಗೆ ತಿಳಿಸುವುದಾಗಿ ಪ್ರಧಾನಮಂತ್ರಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಕಪ್ಪುಹಣ ಇಟ್ಟವರ ಎದೆಯಲ್ಲಿ ನಡುಕ ಉಂಟಾಗಿದೆ

bl
“ಕುಚ್ ನಾಮ್ ಬತಾಯೇಂಗೆ” (ಕೆಲವು ಹೆಸರನ್ನು ಬಹಿರಂಗ ಮಾಡುತ್ತೇವೆ) ಎಂದು ತಮ್ಮ ಅಧಿಕೃತ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಒಂದು ಘಂಟೆಯ ಭೋಜನಕೂಟದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಲೋಕಸಭೆಯ ಚುನಾವಣೆಗೂ ಮುನ್ನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲ ಕಪ್ಪುಹಣವನ್ನು ವಾಪಸ್ ತರುವುದಾಗಿ ಬಿಜೆಪಿ ಹೇಳಿಕೊಂಡಿತ್ತು. ಇದು ಬಿಜೆಪಿಯ ಜಯಕ್ಕೆ ಬಹಳ ಆಪ್ತವಾಗಿ ಕೆಲಸ ಮಾಡಿತ್ತು. ಆದರೆ ಇತ್ತೀಚಿಗೆ ಸುಪ್ರೀಂ ಕೊರ್ಟುಗೆ ಕೊಟ್ಟ ಹೇಳಿಕೆಯಲ್ಲಿ, ಕಪ್ಪು ಹಣದ ಮಾಲೀಕರ ಹೆಸರನ್ನು ಬಹಿರಂಗಪಡಿಸಲು ಕಾನೂನು ತೊಡಕುಗಳಿವೆ ಎಂದು ಸರ್ಕಾರ ತಿಳಿಸಿತ್ತು. ಇದು ದೇಶದಾದ್ಯಂತ ವಿರೋಧಕ್ಕೆ ಎಡೆ ಮಾಡಿಕೊಟ್ಟಿತ್ತು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಈ ಇಬ್ಬಗೆ ನೀತಿಯನ್ನು ವಿರೋಧಿಸಿ ಜನರು ಛೇಡಿಸಿದ್ದರು. ಈಗ ಪ್ರಧಾನಿಯವರ ಈ ಹೇಳಿಕೆಯ ಹಿನ್ನಲೆಯಲ್ಲಿ, ಯಾರ ಯಾರ ಹೆಸರು ಹೊರ ಬರಲಿದೆ ಎಂಬ ಕುತೂಹಲ ಹುಟ್ಟಿದೆ.

 

By Suddi9

Leave a Reply

Your email address will not be published. Required fields are marked *