ಸುದ್ದಿ9ನವದೆಹಲಿ: ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ಲಾಲ್ ಖತ್ತರ್ ಆಯ್ಕೆಯಾಗಿದ್ದಾರೆ. ನೂತನ ಸಿಎಂ ಆಯ್ಕೆ ಬಗ್ಗೆ ಇಂದು ಸಂಜೆ ಅಧಿಕೃತ ಘೋಷಣೆ ಹೊರಬೀಳಲಿದೆ. ಮನೋಹರ್?ಲಾಲ್, ಕರ್ನಲ್? ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಖತ್ತರ್ 1954ರ ಜನವರಿ 1, ರಂದು ಹರಿಯಾಣದ ರೋಹಟಕ್ನಲ್ಲಿ ಜನಿಸಿದರು. ದೆಹಲಿಯ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಮನೋಹರ್ ಲಾಲ್ ಅವಿವಾಹಿತರಾಗಿದ್ದು, 1994ರಲ್ಲಿ ಬಿಜೆಪಿಗೆ ಸೇರ್ಪಡೆಯಾದವರು. ತಮ್ಮ 24ನೇ ವಯಸ್ಸಿನಿಂದಲೇ ಆರೆಸ್ಸೆಸ್ನ ಪ್ರಚಾರಕರಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಪ್ರಚಾರ ಸಮೂಹಕ್ಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮನೋಹರ್ಲಾಲ್, ಬಿಜೆಪಿ ರಾಷ್ಟ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.

la_

By Suddi9

Leave a Reply

Your email address will not be published. Required fields are marked *