ವಿಟ್ಲ : ಚಂದಳಿಕೆಯಲ್ಲಿ ಹರೀಶ್ ಆಚಾರ್ಯ ಮಾಲಕತ್ವದ ಆಶೀರ್ವಾದ್ ಗ್ಯಾರೇಜು ಬೆಂಕಿ ಅವಘಡದಿಂದ ಸಂಪೂರ್ಣ ಸುಟ್ಟುಹೋಗಿ ಅಪಾರ ನಷ್ಟವಾದ ಹಿನ್ನಲೆಯಲ್ಲಿ ಹರೀಶ್ ಆಚಾರ್ಯ ಇವರಿಗೆ ದ ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವತಿಯಿಂದ ೧,೨೫,೦೦೦, ಮೂಡಬಿದರೆ ವಲಯದಿಂದ ೧೦,೦೦೦, ಪುತ್ತೂರು ವಲಯದಿಂದ ೧೦,೦೦೦ ವಿಟ್ಲ ವಲಯದಿಂದ ೧,೫೦,೦೦೦ ರೂಪಾಯಿಗಳ ಚೆಕ್ ಮತ್ತು ವಿಟ್ಲ ಜೀವನ್ ಜನರಲ್ ಸ್ಟೋರ್ ಮಾಲಕ ಅನೂಪ್ ಇವರಿಂದ ೫,೦೦೦ ವೆಚ್ಚದ ಟೂಲ್ಸ್ ಕಿಟ್ ನೀಡಲಾಯಿತು.
ಮಾತೃ ಸಂಘದ ಚೇರ್‌ಮೆನ್ ಎ ಜನಾರ್ಧನ, ನಿರ್ಧೇಶಕ ಪುಂಡಲೀಕ ಸುವರ್ಣ, ಅಧ್ಯಕ್ಷ ದಿನೇಶ್ ಕುಮಾರ್, ಕಾರ್ಯದರ್ಶಿ ಪುರುಷೋತ್ತಮ ಕಮಿಲ, ವಿಟ್ಲ ವಲಯದ ಅಧ್ಯಕ್ಷ ಬಿ ಕೆ ಬಾಬು, ಪುತ್ತೂರು ವಲಯದ ಅಧ್ಯಕ್ಷ ಸುರೇಶ್ ಸಾಲ್ಯಾನ್, ಕಾರ್ಯದರ್ಶಿ ಶರತ್ ರೈ ಹಾಗೂ ವಿಟ್ಲ ವಲಯದ ಸದಸ್ಯರು ಉಪಸ್ಥಿತರಿದ್ದರು. ವಿಟ್ಲ ವಲಯದ ಕಾರ್ಯದರ್ಶಿ ರಾಜಶೇಖರ್ ಆಚಾರ್ಯ ಸ್ವಾಗತಿಸಿದರು. ಸದಸ್ಯ ಪಡಾರು ಚಂದ್ರಶೇಖರ ಭಟ್ ಪ್ರಸ್ತಾವಿಸಿದರು. ನಿಕಟಪೂರ್ನ ಅಧ್ಯಕ್ಷ ಲಕ್ಷö್ಮಣ ಪೂಜಾರಿ ಆರ್ ಎಸ್ ವಂದಿಸಿದರು. ಗೌರವ ಸಲಹೆಗಾರ ನೆಗಳಗುಳಿ ಸುಂದರ ಆಚಾರ್ಯ ನಿರೂಪಿಸಿದರು.
