ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ವಾಣಿಜ್ಯ ಸಂಕರ‍್ಣವೊಂದರಲ್ಲಿ ಕಚೇರಿ ಹೊಂದಿದ್ದ ಜ್ಯೋತಿಷಿಗೆ ಮಹಿಳೆ ಸಹಿತ ಇಬ್ಬರು ಹಲ್ಲೆ ನಡೆಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.
ಮೂಲತಃ ಬಾಗಲಕೋಟೆ ನಿವಾಸಿ ಆಗಿರುವ ಗಾಯಾಳು ಇಲ್ಲಿನ ದುಗರ್ಾಪರಮೇಶ್ವರಿ ಜ್ಯೋತಿಷಾಲಯದ ಪಂಡಿತ್ ಲಕ್ಮೀಕಾಂತ್ ಭಟ್ ಇವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ ರಾಘವೇಂದ್ರ ಮೂಡುಬಿದ್ರೆ ಎಂಬ ಹೆಸರಿನಲ್ಲಿ ಕರೆ ಮಾಡಿ ಜ್ಯೋತಿಷ್ಯ ಕೇಳಲು ಸಮಯ ನಿಗದಿಪಡಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಶನಿವಾರ ಮಧ್ಯಾಹ್ನ ಮಹಿಳೆಯೊಂದಿಗೆ ಮಾಸ್ಕ್ ಹಾಕಿಕೊಂಡು ಬಂದು ಕಬ್ಬಿಣದ ರಾಡಿನಿಂದ ಏಕಾಯೇಕಿ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಹಲ್ಲೆ ನಡೆಸಿದ ಬಳಿಕ ಜ್ಯೋತಿಷ್ಯಾಲಯದ ಬಾಗಿಲು ಮುಚ್ಚಿ ಪರಾರಿಯಾಗಿದ್ದು, ಕೆಲಹೊತ್ತಿನ ಬಳಿಕ ಎಚ್ಚರಗೊಂಡ ಗಾಯಾಳು ಎದ್ದು ಬಂದು ರಕ್ತಸಿಕ್ತ ಗಾಯ ಸಹಿತ ಇತರರಿಗೆ ತಿಳಿಸಿದ್ದಾರೆ. ಇನ್ಸ್ ಪೆಕ್ಟರ್ ಚೆಲುವರಾಜ್, ಅಪರಾಧ ವಿಭಾಗ ಎಸೈ ಕಲೈಮಾರ್ ಮತ್ತಿತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.
