ಕೈಕಂಬ: ಲಯನ್ಸ್ ಕ್ಲಬ್ ಮಂಗಳೂರು ಕಂಕನಾಡಿ ಪಡೀಲ್ ಹಾಗೂ ಲಯನ್ಸ್ ಕ್ಲಬ್ ಗುರುಪುರ -ಕೈಕಂಬ ಇದರ ಸಹಬಾಗಿತ್ವದಲ್ಲಿ ಎ.ಜೆ.ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಕುಂಟಿಕಾನ ಮಂಗಳೂರು ಇವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಶಿಬಿರವು ಕಂದಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಾ. ೧೪ರಂದು ಭಾನುವಾರ ನಡೆಯಿತು.
ಸುಮಾರು ೧೦೩ ಸಾರ್ವಜನಿಕರು ಇದರ ಪ್ರಯೋಜನ ಪಡೆದರು. ೬೧ ಕನ್ನಡಕ ಹಾಗೂ ಡ್ರಾಪ್ಸ್ ಉಚಿತವಾಗಿ ನೀಡಲಾಯಿತು. ಎಜೆ ಆಸ್ಪತ್ರೆಯ ಡಾ.ಜಯರಾಮ್ ಶೆಟ್ಟಿ ಹಾಗೂ ತಂಡದವರು ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿಕAದಾವರ ಗ್ರಾ. ಪಂ.ಅಧ್ಯಕ್ಷ ಉಮೇಶ್ ಮೂಲ್ಯ , ಲ/ಜೆಪ್ರಿಯಾನ್ ತಾವ್ರೊ ,ಲ/ಜೇಮ್ಸ್ ಮೇಂಡ ಹಾಗೂ ಲಯನ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. ಲಯನ್ ಅರುಂಧತಿ ಶೆಟ್ಟಿ ಹಾಗೂ ಟ್ರೂ ವಿಷನ್ ರೂಪ ಆರ್ ಶೆಟ್ಟಿ ಹಾಗೂ ಕಂಕನಾಡಿ ಪಡೀಲ್ ಲಯನ್ಸ್ ಕ್ಲಬ್ ಸದಸ್ಯರು ಇದ್ದರು.


