ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ೧೪ ರಂದು ರಾತ್ರಿ ದ್ವಜರೋಹಣ ಗೊಂಡಿದೆ. ಮೀನ ಸಂಕ್ರಮಣದ ಮೊದಲನೇ ದಿನ ಮಧ್ಯಾಹ್ನ ಮಹಾ ಪೂಜೆಯ ವೇಳೆ ದೇವಿಯಲ್ಲಿ ಪ್ರಾರ್ಥಿಸಿ ನಟ್ಟೋಜರು ಅರ್ಚಕರಿಂದ ಪ್ರಸಾದ ಸ್ವೀಕರಿಸಿ ಕ್ಷೇತ್ರದಿಂದ ನೇರವಾಗಿ ಪುತ್ತಿಗೆ ಅರಸು ಮನೆತನದ ಜೋಯಿಸರ ಮನೆಗೆ ಹೋಗಿ ಅಲ್ಲಿತಂಗುವರು. ಮರುದಿನ ಬೆಳಗ್ಗೆ ಜೋಯಿಸರು ರಾಶಿ ಇಟ್ಟ ನಂತರ ಕಾಣಿಕೆ ಮೌಲ್ಯವನ್ನು ನಟ್ಟೋಜರು ಇರಿಸಿ ದಿನ ನಿಶ್ಚಯಕ್ಕೆ ಮುಂದಾಗುವರು.
ಕಾಣಿಕೆ ಇಟ್ಟ ರಾಶಿಯ ಆಧಾರದ ಮೇಲೆ ಜೋಯಿಸರು ಆ ವರ್ಷ ಅವಭ್ರಥದ ದಿನವನ್ನು ತಿಳಿಸುತ್ತಾರೆ ಈ ದಿನ ಹಿಂಗಾರದ ಹಾಳೆಯೊಂದಿಗೆ ನಟ್ಟೋಜರ ಕಿವಿಯಲ್ಲಿ ಗೌಪ್ಯವಾಗಿ ಜೋಯಿಸರು ಸೂಚಿಸುತ್ತಾರೆ ನಟ್ಟೋಜರು ಪುತ್ತಿಗೆಯಿಂದ ಹಿಂಗಾರದ ಹಾಳೆಯೊಂದಿಗೆ ಸಂಕ್ರಮಣದ ರಾತ್ರಿ ೮ ಗಂಟೆಗೆ ಪೊಳಲಿ ದೇವಸ್ಥಾನಕ್ಕೆ ಬರುತ್ತಾರೆ ಆದಿವಸ ನಟ್ಟೋಜರು ಬಂದು ಹಿಂಗಾರದ ಹಾಳೆಯನ್ನು ಆರ್ಚಕರಲ್ಲಿ ಕೊಟ್ಟು ಪ್ರಸಾದ ಸ್ವೀಕರಿಸುವವರೆಗೆ ಬೇರೆ ಯಾರಿಗೂ ಪ್ರಸಾದ ಕೊಡುವ ಪದ್ಧತಿಯಿಲ್ಲ .
ಮಧ್ಯಾಹ್ನ ಕೊಡಮಣಿತ್ತಾಯ ದೈವದ ಭಂಡಾರ ದೇವಸ್ಥಾನದಿಂದ ಉಳಿಪಾಡಿಗುತ್ತಿನ ದೈವಸ್ಥಾನಕ್ಕೆ ಹೋಗಿ ಅಲ್ಲಿ ರಾತ್ರಿ ದೈವಗಳ ಪರ್ವವು ನಡೆದು ಮಳಲಿ ಸೀಮೆಯವರು ಹಾಗೂ ಊರಿನವರು ಸೇರಿಕೊಂಡು ತೆಂಗಿನ ಸೋಗೆಯ ಸೂಟೆ ವಾದ್ಯ ಘೋಷದೊಂದಿಗೆ ಭಂಡಾರವು ಪೊಳಲಿಗೆ ಬರುವಾಗ ಅಮ್ಮುಂಜೆ ಗುತ್ತಿನವರು ವಾದ್ಯ ಘೋಷ್ಟಿಯೊಂದಿಗೆ ಸಾವಿರ ಸೀಮೆಯ ಜೊತೆಯಲ್ಲಿ ದೇವಸ್ಥಾನದ ಬಡಗು ಬದಿಯಲ್ಲಿರುವ ಕೋಳಿಕುಂಟ ಗದ್ದೆಗೆ ಹೋಗಿ ಅಲ್ಲಿ ಭಂಡಾರವನ್ನು ಎದುರುಗೊಂಡು ಸಂಭ್ರಮದಿAದ ಕರೆ ತರುವರು.
ಈಕಡೆಯಿಂದ ಮುಂಚಿತವಾಗಿ ತೀಯ ಸಮಾಜದ ೧೮ ಭಗವತೀ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಉಳ್ಳಾಲ ಭಗವತೀ ಕ್ಷೇತ್ರಕೊಳಪಟ್ಟ ನಂದ್ಯ ಮಣೇಲ್ ಗ್ರಾಮದ ಸಮಾಜ ಬಾಂಧವರ ಕೇಂದ್ರಸ್ಥಾನವಾದ ಶ್ರೀ ಕ್ಷೇತ್ರ ನಂದ್ಯದಿ0ದ ಶ್ರೀ ಭಗವತೀ ಮಾತೆಯ ಭಂಡಾರ ಬಂದಮೇಲೆ ದೇವಸ್ಥಾನದಲ್ಲಿಗುತ್ತಿನವರು, ಸ್ಥಾನದವರು,ಆರ್ಚಕರು ಇದ್ದು ಪ್ರಾರ್ಥಿಸಿ ಧ್ವಜ ಪಟದೊಂದಿಗೆ ದೇವರ ಬಲಿ ಹೊರಟು ಬಂದು ದ್ವಜಾರೋಹಣಗೊಳ್ಳತ್ತದೆ.
ತದನತರ ಸ್ಥಾನದವರಿದ್ದು, ಉತ್ಸಾವಾಲಂಕಾರಕ್ಕಾಗಿ ಪ್ರಾರ್ಥಿಸಿ ಉತ್ಸವ ಮೂರ್ತಿಯನ್ನು ಕೇಪುಳಹೂವಿನ ದಂಡೆಯಿAದ ಅಲಂಕರಿಸಿ “ಬಯ್ದನಬಲಿ” ಹೊರಡುವುದು ಇದರ ಉಡಿಕೆ ಸುತ್ತಿನ ವೇಳೆಗೆ ಹರಿಕೆ ಪುಷ್ಪಪೂಜೆ ಇತ್ಯಾದಿ ಸೇವೆಗಳು ನಡೆಯುತ್ತದೆ. ಆ ಬಳಿಕ ನಿತ್ಯದ ರಾತ್ರಿಯ ಪೂಜೆ ಬಲಿ ನಡೆದು. ಭೂತದ ಬಲಿಯಾಗಿ ಪ್ರಾತಃ ಕಾಲದಲ್ಲಿ ದೀಪದ ಬಲಿ ಜರಗುತ್ತದೆ. ಈ ಹೊತ್ತಿಗೆ ಹರಕೆ ಹೇಳಿದ ಮಕ್ಕಳ *ಕಂಚಿಲು ಸೇವೆ* ನಡೆಯುತ್ತದೆ.ಆಬಳಿಕ ನಿಯಮದಂತೆ ನಿರ್ದಿಷ್ಟ ವ್ಯಕ್ತಿಗಳಿಗೆ ಪ್ರಸಾದ ವಿತರಣೆಯಾಗಿ ಚಿಕ್ಕರಥೋತ್ಸವದೊಂದಿಗೆ ಬಲಿ ಒಳಗೆ ಬರುವುದು ಪೀಠಪೂಜೆಯಾದೊಡನೆ ನಟ್ಟೋಜರು ಹಿಂದಿನ ದಿನ ನೀಡಿದ ಹಿಂಗಾರವನ್ನು ಭಟ್ಟರು ನಟ್ಟೋಜರ ಕೈಗೆ ಕೊಡುವರು.
ಈ ಸಂದರ್ಭದಲ್ಲಿ ಸ್ಥಾನದವರು, ಗುತ್ತಿನವರು, ಅವರವರ ಸ್ಥಾನದಲ್ಲಿ ಕುಳಿತ ಬಳಿಕ ಉಗ್ರಾಣಿ ಮುಖಾಂತರ ವೇಷದಾರಿಗಳಾದ ಪಂಬದರನ್ನು ಗೋಪುರಕ್ಕೆ ಬರುವಂತೆ ಹೇಳಿ ಕಳುಹಿಸುವರು. ಅವರು ಬಂದು ಸಾವಿರ ಸೀಮೆಯವರಿಂದ ಅಪ್ಪಣೆ ಪಡೆದು “ನಂದ್ಯದಬೆಳ್ಚಡ” ಮನೆಯಿಂದ ತಂದಿರಿಸಿದ ಮೂರ್ತಿಯನ್ನು ಸಂಪ್ರದಾಯದಂತೆ ಮೂರು ಸುತ್ತು ತಿರುಗಿಸುವರು ಆಮೇಲೆ ಮೂರ್ತಿಯನ್ನು ಕೆಳಗಿಳಿಸಿ ಪ್ರಮಾಣ ಬಾವಿಗೆ ಒಂದು ಸುತ್ತು ಬಂದು ಗೋಪುರದಲ್ಲಿ ನರ್ತಿಸುವರು. ಆಗ ನಟ್ಟೋಜರು ಹಿಂಗಾರಾದೊದಿಂಗೆ ದುರ್ಗದೇವಿ ಗುಡಿಯ ಹಿಂಬದಿಯಲ್ಲಿ ನಿಂತ ಶೇರಿಗಾರನ ಬಳಿ ಬಂದು ಕೈಗೆ ಹಿಂಗಾರದ ಹಾಳೆಯನ್ನುನಟ್ಟೋಜರು ಕೊಟ್ಟು ಅವಭೃಥದ ದಿನವನ್ನು ಗುಟ್ಟಾಗಿ ಸೇರಿಗಾರನಲ್ಲಿ ತಿಳಿಸುತ್ತಾರೆ.
ಹಿಂಗಾರದೊಂದಿಗೆ ಶೇರಿಗಾರನು ಗೋಪುರದ ಎದುರಿಗೆ ಬಂದು ನರ್ತನ ಮಾಡುತ್ತಿರುವ ಭದ್ರಕಾಳಿ ಬಿಂಬದ ವೇಷದಾರಿಯಾದ ಹಾಗೂ ಅರಸುದೈವದ ಆಯುಧಗಳನ್ನು ಹಿಡಿದ ಪಂಬದರ ಕೈಗೆ ಹಿಂಗಾರವನ್ನು ಕೊಟ್ಟು ಕಿವಿಯಲ್ಲಿ ರಹಸ್ಯವಾಗಿ ಅವಭ್ರಥದ ದಿನವನ್ನು ಹೇಳುತ್ತಾನೆ. ಆಬಳಿಕ ಪಂಬದನು ಗಂಟೆ ಬಾರಿಸಿ ಜೋರಾಗಿ ನೆರೆದ ಸಾವಿರ ಸೀಮೆಯವರಿಗೆ ಮನದಟ್ಟಾಗುವಂತೆ ೧ ತಿಂಗಳ ಜಾತ್ರಾ ಮಹೋತ್ಸವದ ದಿನವನ್ನು ತಿಳಿಸುತ್ತಾರೆ. ದೀ ಭಾರಿ ೨೯ ದಿನದ ಜಾತ್ರೆ ನಡೆಯಲಿದೆ.
