ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾ.೭ ರಂದು ಭಾನುವಾರ ನಗರಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕುಟುಂಬಸಮೇತರಾಗಿ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯಕ್ ದೇವರ ಸ್ಮರಣಿಕೆ ನೀಡಿ ಶಾಲು ಹಾಕಿ ಗೌರವಿಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರಧ್ಯಕ್ಷ ದೇವಪ್ಪ ಪೂಜಾರಿ,ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ್ , ವೆಂಕಟೇಶ್ ನಾವಡ, ಸನತ್ ಕುಮಾರ್ ಮತ್ತಿತರರು ಇದ್ದರು.

