ಪೊಳಲಿ: ಪೊಳಲಿ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಇತ್ತಿಚೇಗೆ ವಿಶೇಷ ವೇಷ ಧರಿಸಿ ಹಣ ಸಂಗ್ರಹವನ್ನು ಮಾಡಿ ಸುದ್ದಿಯಾಗಿದ್ದ ವಿಕ್ಕಿ ಶೆಟ್ಟಿ ಬೆದ್ರ ಇವರು ಅನಾರೋಗ್ಯ ಪೀಡಿತ ಬಜಾಲ್ ತನೀಶ್ ಗಟ್ಟಿ ಎಂಬ ಮಗುವಿನ ಚಿಕಿತ್ಸಾ ವೆಚ್ಚಕ್ಕೆ 1 ಲಕ್ಷ ರೂಪಾಯಿಯನ್ನು ಶ್ರೀ ಕ್ಷೇತ್ರ ಪೊಳಲಿ ದೇವಿಯ ಸಮ್ಮುಖದಲ್ಲಿ ಮಗುವಿನ ಮನೆಯವರಿಗೆ ಹಸ್ತಾಂತರಿಸಿದರು.
ವಿಕ್ಕಿ ಶೆಟ್ಟಿ ಬೆದ್ರ ಇವರಿಗೆ ಬೆಂಬಲ ನೀಡಿದ ಹಿಂದೂ ಜಾಗರಣ ವೇದಿಕೆ ಶ್ರೀ ಸುದರ್ಶನ ಘಟಕ ಪೊಳಲಿ ಇದರ ಮುಖ್ಯಸ್ಥ ಸಂತೋಷ್ ಶೆಟ್ಟಿ ಪೊಳಲಿ ಸುನಿಲ್ ಪೊಳಲಿ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.
