ಕೈಕಂಬ:ಮಂಗಳೂರು ತಾಲೂಕಿನ ಮೊಗರು ಗ್ರಾಮದ ಮಳಲಿ ದೇವರಗುಡ್ಡೆ ಎಂದೇ ನಾಮಾಂಕಿತಗೊಂಡ ಸ್ಥಳದಲ್ಲಿ ಪುರಾತನ ದೇವಸ್ಥಾನ ಇದ್ದ ಕುರುಹುಗಳು ಕಂಡು ಬಂದಿದ್ದು ಅದರ ಪ್ರಕಾರ ಇಲ್ಲಿಯ ಪುರಾತನ ದೇವಸ್ಥಾನ ಎಷ್ಟೋ ವರ್ಷಗಳ ಹಿಂದೆ ನೆಲಸಮವಾಗಿದ್ದ ಕುರುಹುಗಳು ಕಂಡುಬಂದಿತ್ತು.

ಕ್ಷೇತ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಪೂರ್ವಭಾವಿಯಾಗಿ ದೇವರ ಗುಡ್ಡೆಯಲ್ಲಿ ಪ್ರಶ್ನೆ ಇಡುವುದೆಂದು ದಿನ ನಿಗದಿ ಮಾಡಲಾಗಿತ್ತು. ಕೋಡಿಮಜಲು ವಿದ್ವಾನ್ ಬ್ರಹ್ಮ ಶ್ರೀ ಕೆ. ಅನಂತ ಉಪಾಧ್ಯಾಯರ ದೈವಜ್ಞತ್ವದಲ್ಲಿ ಮಾ. ೭ರದು ಸೋಮವಾರಬೆಳಗ್ಗೆ ೯.ಗಂಟೇಗೆ ಪ್ರಾರ್ಥನೆಮಾಡಿ ” ಅಷ್ಟಮಂಗಲ ಪ್ರಶ್ನೆ” ಮೂರು ದಿನಗಳ ಪರ್ಯಂತ ನಡೆಯಲಿರುವುದು ಎಂದು ಊರಿನ ಭಕ್ತಾಧಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *