ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಮಾಜ ಕಲ್ಯಾಣ ಯೋಜನೆ ಅಡಿಯಲ್ಲಿ ಬ್ರಹ್ಮಾವರ ವಲಯದ ದಿ. ಭುಜಂಗ ಶೆಟ್ಟಿ ಯವರ ಪತ್ನಿ ಬಾಬಿ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಆರ್ಥಿಕ ಸಹಾಯಧನದ ಚೆಕ್ಕನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಹಾಗೂ ಕಾರ್ಯದರ್ಶಿ ಜಯಕರ್ ಶೆಟ್ಟಿ ಇಂದ್ರಾಳಿ ಬಾರ್ಕುರು ಹಣೆಹಳ್ಳಿ ದಿ. ಭುಜಂಗ ಶೆಟ್ಟಿ ಯವರ ಪತ್ನಿ ಬಾಬಿ ಶೆಟ್ಟಿಯವರಿಗೆ ನೀಡಿದರು. ಅವರಿಗೆ ಮೂರು ಗಂಡು ಮಕ್ಕಳಿದ್ದರು ಮೂವರು ಸಹ ವಿಕಲಚೇತನರಾಗಿದ್ದು ಅವರು ಕಡು ಬಡತನದಿಂದ ಜೀವನ ಸಾಗಿಸುತ್ತಿರುವ ಅವರ ಪರಿಸ್ಥಿತಿಯನ್ನು ಕಂಡು ಮನಗಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ದತ್ತು ಸ್ವೀಕಾರ ಮಾಡಿ ಅವರಿಗೆ ಸಹಾಯಧನವನ್ನು ನೀಡಲಾಯಿತು. 
ಈ ಸಂದರ್ಭದಲ್ಲಿ ಶ್ರೀ ಮನೋಹರ್ ಶೆಟ್ಟಿ ಅಧ್ಯಕ್ಷರು ತೋನ್ಸೆ ಬಂಟರ ಸಂಘ, ಸಂತೋಷ್ ಶೆಟ್ಟಿ, ಜೊತೆ-ಕಾರ್ಯದರ್ಶಿ ಉಡುಪಿ ಬಂಟ್ಸ್ ಸಂಘ, ಶ್ರೀ ಉದಯ್ ಕುಮಾರ್ ಶೆಟ್ಟಿ ಬ್ರಹ್ಮಾವರ ಬಂಟ್ಸ್ ಸಂಘ, ಶ್ರೀ ರವಿ ಜತ್ತಬೆಟ್ಟು ಹಾಗೂ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಉಪಸ್ಥಿತರಿದ್ದರು.
