ಮಂಗಳೂರು:ತುಳುನಾಡಿನ ಕರಾವಳಿ ಪ್ರದೇಶವು ಇಂದು ಸ್ವಚ್ಚತೆಯನ್ನು ಕಾಪಾಡುದರೊಂದಿಗೆ ತನ್ನ ಪರಿಸರವನ್ನು ಹಸಿರಾಗಿರಿಸಿ ಶುದ್ದ ಗಾಳಿಯನ್ನು ಪರಿಸರಕ್ಕೆ ನೀಡುತ್ತಿದ್ದು ಅದಕ್ಕೆ ಕೇವಲ ಸರಕಾರ, ನಗರ ಪಾಲಿಕೆ ಮಾತ್ರವಲ್ಲದೆ ಇತರ ಅನೇಕರ ಕೊಡುಗೆಯಿದೆ. ಇಂತವರಲ್ಲಿ ತನ್ನ ಪರಿಸರದಲ್ಲಿ ಹಸಿರನ್ನೇ ತನ್ನ ಉಸಿರಾಗಿಸಿಕೊಂಡ ಇತ್ತೀಚೆಗೆ ಕೇವಲ ಒಂದು ವಾರದ ಅಂತರದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತುಳುನಾಡಿನ ಹೆಮ್ಮೆಯ ಪುತ್ರಿ ಆರ್. ಜೆ. ರಶ್ಮಿ ಉಳ್ಳಾಲ್ ಪ್ರಮುಖರು.rashmi3
ರಶ್ಮಿ ಉಳ್ಳಾಲ್ ಅವರು ಬ್ಯಾಂಕ್ ಸಿಬ್ಬಂದಿ ಆಗಿದ್ದರು. ಎ. ಪ್ರೇಮನಾಥ್ ಮತ್ತು ಸರಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಪ್ರಮೀಳಾ ಕುಮಾರಿ ಅವರ ಸುಪುತ್ರಿ. ಎಂ.ಕಾಂ ಡಿಸ್ಟಿಂಷನ್ ಪಡೆದು ಶೈಕ್ಷಣಿಕ ಕ್ಷೇತ್ರ ದಲ್ಲೂ ಸಾಧನೆ ಮಾಡಿದವರು ಇವರು. ಪೋಷಕರಿಂದ ಪ್ರೇರಣೆ ಪಡೆದು ಸಮಾಜ ಸೇವೆಯನ್ನು ತನ್ನ ೧೬ ನೇ ವಯಸ್ಸಲ್ಲಿ ಆರಂಭಿಸಿದ್ದರು. ಸರಕಾರೇತರ ಸಂಘಟನೆ “ದಿವ್ಯಾಸ್ ಯುವ ಸೇವಾ ಆರ‍್ಗನೈಜೇಷನ್” ನಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮ ಸಂಗಡಿಗರೊಂದಿಗೆ “ಸ್ಟೂಡೆಂಟ್ಸ್ ಆಫ್ ದಿ ಈಯರ್” ಮಕ್ಕಳಿಗೆ ಮೌಲ್ಯ ದ ಬಗ್ಗೆ ಮೊತ್ತಮೊದಲ ಬಾರಿಗೆ ಜಿಲ್ಲಾ ಮಟ್ಟದ ಸ್ಪರ್ದೆ ನಡೆಸಿ ಮಂಗಳೂರಿನ ಎಲ್ಲಾ ವಿದ್ಯಾ ಸಂಸ್ಥೆ ಯಿಂದ ಪ್ರಶಂಸೆ ಯನ್ನು ಪಡೆದಿರುವರು . ಮರವನ್ನು ಬೆಳೆಸಬೇಕು , ಉಳಿಸಬೇಕು , ಪ್ರಕೃತಿಯ ಮಹತ್ವ , ಸ್ವಚ್ಛ ಮಂಗಳೂರು ಈ ವಿಷಯದ ಬಗ್ಗೆ ಕಾರ್ಯಕ್ರಮ ನಡೆಸಿದ್ದು , ಬಾಲಾಶ್ರಮ ಹಾಗೂ ವೃದಾಶ್ರಮಕ್ಕೆ ಅಗತ್ಯ ವಿರುವ ವಸ್ತುಗಳ ಜೊತೆಗೆ ಊಟ , ತಿಂಡಿಯ ವ್ಯವಸ್ಥೆ, ಮನೋರಂಜನಾ , ಹಾಗೂ ಆಶ್ರಮದ ಮಕ್ಕಳಿಗೆ ಶಿಕ್ಷಣದ ಮೌಲ್ಯ ವನ್ನು ತಿಳಿಸುವ ಕಾರ್ಯಕ್ರಮ ಅನೇಕ ಬಾರಿ ಯಶಸ್ವಿ ಯಾಗಿ ನಡೆಸುತ್ತಾ ಬಂದಿರುವರು. ಅನೇಕ ಮಹಿಳೆಯರಿಗೆ ಸಲಹೆ ಮಾಡುವ ಕಾರ್ಯಕ್ರಮ  ನಡೆಸುತ್ತಾ ಬಂದಿದ್ದಾರೆ.

rashmi4

ಬಾಲ್ಯದಿಂದಲೇ ರೇಡಿಯೋ ಕ್ಷೇತ್ರ ದಲ್ಲಿ ವಿಶೇಷ ಆಸಕ್ತಿ ಪಡೆದಿದ್ದು ಸ್ವಾಮಿ ವಿವೇಕಾನಂದರ ತತ್ವ ಪಡೆದು ಮಂಗಳೂರಿನ ಆಕಾಶವಾಣಿ ಯಲ್ಲಿ “ಯುವ ವಾಣಿ ” ಯುವ ಜನರಿಗೆ ಸ್ಪರ್ದೆ ನೀಡುವ ಬಹಳಷ್ಟು ರೇಡಿಯೋ ಕಾರ್ಯಕ್ರಮ ನಡೆಸಿದ್ದು , ೯೩.೫ ರೆಡ್ ಎಫ್. ಎಂ. ಅಲ್ಲಿ ರೇಡಿಯೋ ಜಾಕಿ ಆಗಿ ಜನರಿಗೆ ಪರಿಸರ ಸಂರಕ್ಷಣೆ , ಸಾಮಾಜಿಕ ಕಳಕಳಿಯನ್ನು ಜೊತೆಗೆ ರೇಡಿಯೋ ಕ್ಷೇತ್ರ ದಲ್ಲಿ ವಿಭಿನ್ನತೆ ಯನ್ನು ತಂದು ಮಂಗಳೂರು , ಉಡುಪಿ, ಕುಂದಾಪುರ ,ಕಾಸರಗೋಡು ಸೇರಿದಂತೆ ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆ ಪಡುವ ವಿಷಯ . ಹೆಸರಾಂತ ಕನ್ನಡ ಹಾಗು ತುಳು ಚಿತ್ರರಂಗದ ಎಲ್ಲಾ ಶ್ರೇಷ್ಠ ಕಲಾವಿದರ ರೇಡಿಯೋ ಸಂಸ್ಕರಣೆ ನಡೆಸಿದ್ದು ಇವರು ಹಲವಾರು ಸ್ಥಳೀಯ ಪ್ರತಿಭೆ ಯನ್ನು ಗುರುತಿಸಿ ಸಂವಾದ ನಡೆಸಿದ್ದಾರೆ. ಸ್ವರ ಶಿಕ್ಷಣ ಅಭಿಯಾನ ದ ಬಗ್ಗೆ ಅಂಗ್ಲ ಭಾಷೆಯಲ್ಲಿ ನೀಡಿದ ಡಾಕ್ಯುಮೆಂಟರಿ ಗೆ ನ್ಯಾಷನಲ್ ಅರ್ಡಿ ಸಿಕ್ಕಿದ್ದು ಸ್ವರ ( ವಾಯ್ಸ್ ಪ್ರೆಸೆಂಟೇಷನ್ ) ನೀಡಿದ ಹೆಗ್ಗಳಿಕೆ ಇವರದ್ದು. ರಾಷ್ಟ್ರೀಯ ಮಟ್ಟದ ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿದ್ದು, ತುಳು ಸಿನೇಮಾ ಪತ್ತನಾಜೆ , ಉಮಿಲ್ ಸೇರಿದಂತೆ ಹಲವಾರು ಚಲನಚಿತ್ರ ಹಾಗೂ ಜಾಗೀರಾತುಗಳಿಗೆ ವಾಯ್ಸ್ ಡಬ್ಬಿಂಗ್ ಮಾಡಿದ ಶ್ರೇಯ ರಶ್ಮಿಯವರದ್ದಾಗಿದೆ .rashmi6

ಬಹಳಷ್ಟು ಸಮಾಜಕ್ಕೆ ತಿಳಿಹೇಳುವ ಡಾಕ್ಯುಮೆಂಟರಿ ನಡೆಸಿದ್ದು , ಚಿಕ್ಕ ಅಂಗಡಿಗಳಲ್ಲಿ ಚೌಕಾಸಿ ಮಾಡದಿರಿ , “ರೈತರ ಮಹತ್ವ “, ಮಹಿಳೆಯರನ್ನು ಗೌರವಿಸು , ಗಿಡ ನೆಡಲು ಜಾಗ ಹುಡುಕುವವರಿಗೆ ಸ್ಮಶಾನ ದಲ್ಲೂ ಗಿಡ ನೆಟ್ಟ ನಿರ್ಮಾಣ – ಮಾಧವ್ ಉಳ್ಳಾಲ್ , ಕುತ್ತಾರು ತಿಮ್ಮಕ್ಕ ಪಾರ್ದನ ಕಲಾವಿದೆ . ಮಹಿಳಾ ಸಾಧಕಿಯನ್ನು ಪರಿಚಯಿಸುವ ಪ್ರಯತ್ನ , ಹೀಗೆ ವಿವಿಧ ಡಾಕ್ಯುಮೆಂಟರಿ ಗೆ  ವಾಯ್ಸ್ , ನಿರ್ದೇಶನ ಮಾಡಿ ಜನಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕುತ್ತಾರು ಆಶ್ರಮದಲ್ಲಿ ಆಶ್ರಮದ ಮಕ್ಕಳ ಸಹಾಯದಿಂದ ಸೀಡ್ ಬಾಲ್ ( ಕೆಂಪು ಮಣ್ಣು + ಗೂ ಮೂತ್ರ + ಸೆಗಣಿ ಮಿಶ್ರಣದ ಒಳಗಡೆ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವುದು ) ಅಭಿಯಾನ ವನ್ನು ನಡೆಸಿದ್ದು ೧೦೦೦ ಕ್ಕೂ ಹೆಚ್ಚು ಸೀಡ್ ಬಾಲ್ ತಯಾರಿಸಿ ಯೆನಪೋಯ ಕಾಲೇಜು ಪರಿಸರದಲ್ಲಿ ಗಿಡ ಬೆಳೆದ ಕೀರ್ತಿ ಇವರದ್ದು. ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುವ ಇವರು ತನ್ನ ವಿವಾಹ ದಂದು ಬಂದ ಎಲ್ಲಾ ಅಥಿತಿಗಳಿಗೆ ಗಿಡವನ್ನು ಉಡುಗೊರೆ ಯಾಗಿ ನೀಡಿದ್ದು ಒಂದು ಇತಿಹಾಸವೇ ಸರಿ. ಮಾತಿನ ಜೊತೆಗೆ ಬರವಣಿಗೆ ಯಲ್ಲೂ ಗುರುತಿಸಿಕೊಂಡಿದ್ದು ಮರಕ್ಕೊಂದು ಪುನರ್ಜನ್ಮ ಪಶ್ಚಿಮ ಘಟ್ಟ ಎಂಬ ಸ್ಪರ್ದೆ , ಪ್ರಕೃತಿಯ ವಿರುದ್ಧ ಯಾವತ್ತೂ ಹೋಗದಿರೋಣ ಶಿರ್ಷಿಕೆ ಹೊಂದಿರುವ ಬಹುತೇಕ ಬರವಣಿಗೆ ಸಾಮಾಜಿಕ ಜಾಗ್ರತಿಯನ್ನು ಮೂಡಿಸುದರಿಂದ ಕೂಡಿದ್ದು ಇವರು ಬರೆದ ೧೦೦ ಕ್ಕೂ ಹೆಚ್ಚು ಬರವಣಿಗೆ ನಾಡಿನ ಖ್ಯಾತ ಪತ್ರಿಗೆಗಳಲ್ಲಿ ಪ್ರಕಟಗೊಂಡಿದೆ. ಮಂಗಳೂರಿನ ಬಹಳಷ್ಟು ಬ್ರಹತ್ ವೇದಿಕೆ ಯಲ್ಲಿ ಮುಖ್ಯ ಅತಿಥಿಯಾಗಿ ಕಾಣಿಸಿ ಕೊಳ್ಳುತ್ತಿರುವ ಇವರು “ಬದುಕಿನ ದಾರಿ ” ಹಾಗೆ ಪ್ರಕೃತಿ ಸಂರಕ್ಷಣೆ , ಪ್ರಕೃತಿ ಮಹತ್ವ , ಸೀಡ್ ಬಾಲ್ ಅಭಿಯಾನ , ಹೀಗೆ ಪ್ರಕೃತಿಯ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸುತ್ತಿರುವರು. ಇವರ ಸಾಮಾಜಿಕ ಕಾಳಜಿ ಗುರುತಿಸಿ ಸ್ಥಳೀಯ ಅನೇಕ ಸಂಘಟನೆಗಳು ಇವರನ್ನು ಗೌರವಿಸಿ ಸನ್ಮಾನಿಸಿದೆ.rashm2

“ದಿವ್ಯಾಸ್ ಅನ್ನಪೂರ್ಣ ” ಯೋಜನೆಯ ಪ್ರಕಾರ ಮಂಗಳೂರಿನ ಫಳ್ನೀರ್ , ಕಂಕನಾಡಿ , ಸ್ಟೇಟ್ ಬ್ಯಾಂಕ್ , ಹಂಪನಕಟ್ಟ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಮೂಕ ಪ್ರಾಣಿ ಹಾಗು ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಿರುವರು . ಲಾಕ್ ಡೌನ್ ಸಂದರ್ಭದಲ್ಲಿ ಊಟದ ಕಿಟ್ ಹಾಗು ಸರಕಾರಿ ಶಾಲೆಗೆ ಪುಸ್ತಕ , ಕೋವಿಡ್ ರ‍್ಮೋಮೀಟರ್ .ಮನೆಗೊಂದು ಗಿಡ , ಅಸಹಾಯಕರಿಗೆ ಊಟ ತಯಾರಿಸಲು ಪಾತ್ರೆಯ ವ್ಯವಸ್ಥೆ ಹೀಗೇ ಬಹಳಷ್ಟು ಸಮಾಜಮುಖಿ ಕಾರ್ಯಗಳಿಗೆ  ಸಹಾಯ ಮಾಡಿರುತ್ತಾರೆ .

ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ಮುಂದುವರಿಯಬೇಕು ಎನ್ನುವುದು ರಶ್ಮಿಯ ಉದ್ದೇಶ. ಪ್ರಸ್ತುತ ಬೆಂಗಳೂರಿನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು ತನ್ನದೇ ಆದ ಯೌಟ್ಯೂಬ್ ಚಾನೆಲ್ “ಆರ್ ಜೆ ರಶ್ಮಿ ಉಳ್ಳಾಲ್” ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ . ಇತ್ತೀಚೆಗೆ ಕರ್ನಾಟಕ ಹೃದಯವಂತರರು ೨೦೨೧ ಪ್ರಶಸ್ತಿ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನದಂದು

ಅಪರಾಧ ನಿಯಂತ್ರಣ ಪಡೆ ಮತ್ತು ಅಭಿಜ್ಞಾನ ಪ್ರತಿಷ್ಠಾನದಿಂದ ಮಹಿಳಾ ಸಾಧಕರ ಪ್ರಶಸ್ತಿ ೨೦೨೧ ರಾಷ್ಟ್ರೀಯ ಪ್ರಶಸ್ತಿ ಯನ್ನು ಇವರ ಮನೆಗೆ ತಂದು ನೀಡಿದ್ದು ನಿಜಕ್ಕೂ ಇವರ ಸೇವೆಗೆ ಸಂದ ಗೌರವವಾಗಿದೆ.

By suddi9

Leave a Reply

Your email address will not be published. Required fields are marked *