ಕಲ್ಲಡ್ಕ :ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ‌ಕಲ್ಲಡ್ಕ ಉಪಸ್ಥಿತಿಯಲ್ಲಿ, “ಕೆಡ್ಡಸ” ಹಬ್ಬವನ್ನುಆಚರಿಸಲಾಯಿತು.IMG-20210212-WA0000

ಕಾರ್ಯಕ್ರಮದ ಮೊದಲಿಗೆ ವಿವೇಕಾನಂದ ವಿದ್ಯಾವರ್ಧಕ  ತುಳಸಿ ಕಟ್ಟೆಯ ಮುಂದೆ ಗೋಮಯದಿದ ಶುದ್ದೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸಿ, ಭೂಮಿದೇವಿಯ ಸಾನಿಧ್ಯ ರಚಿಸಿ , ದೀಪ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಿಸಿನ ಕುಂಕುಮ, ಪಚ್ಚೆಹೆಸರುಪುಡಿ, ವೀಳೆದ್ಯೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕೋಸ್ಕರಇಟ್ಟು ಹುರುಳಿ, ಹೆಸರು ಕಾಳು, ಒಣ ಕೊಬ್ಬರಿ, ಕಡಲೆ ಕಾಯಿಗಳ ಮಿಶ್ರಣ(ನನ್ಯೆರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯ ತಾಯಿಯಾದ ಜಯಂತಿ ಹಾಗೂ ಸುಶೀಲ ಭೂಮಿಗೆಎಣ್ಣೆ, ಹಾಲು ಹಾಕಿ ಬಡಿಸಿದರು.IMG-20210212-WA0091

ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಪ್ರೀತಾರವರು ಕೆಡ್ಡಸದ ಮಹತ್ವವನ್ನು ತಿಳಿಸುತ್ತಾ “ತುಳುನಾಡಿನಲ್ಲಿ ವಾರ್ಷಿಕಾವರ್ತನದಲ್ಲಿ ಆಚರಣೆಯಾಗುವ ಒಂದು ಹಬ್ಬ. ಕೃಷಿ ಚಟುವಟಿಕೆಯ ವಿಷಯದಲ್ಲಿ ಆಚರಣೆಯಾಗುತ್ತದೆ.IMG-20210212-WA0080

ಸಮೃದ್ಧಿ ಮತ್ತು ಫಲಾಪೇಕ್ಷೆಯ ಆಶಯದಿಂದ ಇದು ಆಚರಣೆಯಾಗುತ್ತದೆ. ಇದು ತುಳು ತಿಂಗಳ ಪೊನ್ನಿ(ಮಕರ)೨೭ಕ್ಕೆ ಭೂಮಿ ದೊಡ್ಡವಾದಳೆಂಬ ನಂಬಿಕೆ. ಕೆಡ್ಡಸಆಚರಣೆಯನ್ನುಭೂಮಿತಾಯಿಯು ಸಾಮಾನ್ಯ ಸ್ತ್ರೀ ಎಂಬಂತೆ ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯ ರಜೋಮಯೋವಾಗುತ್ತಾಳೆ ಎಂದುಭಾವಿಸಿ, ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸಗಳಲ್ಲಿ ಶುರುಕೆಡ್ಡಸ, ನಡುಕೆಡ್ಡಸ ಮತ್ತುಕಡೆಕೆಡ್ಡಸಎಂದು ಮೂರು ದಿನಗಳ ಕಾಲ ಆಚರಣೆ ಮಾಡುತ್ತಾರೆ.ಕೆಡ್ಡಸದ ಎರಡನೇ ದಿನ ಬೇಟೆ ಸಂಸ್ಕೃತಿಯೂ ಇತ್ತು, ಇದು ಕೃಷಿಯ ಸಂರಕ್ಷಣಾ ವಿಧಾನವಾಗಿದೆ .IMG-20210212-WA0001

ತುಳುನಾಡಿನ ಜನರು ಪ್ರಕೃತಿಯಆರಾಧಕರಾಗಿರುವುದರಿಂದ ಈ ಆಚರಣೆಯನ್ನುತಲಾತಲಾಂತರದಿ ದ ಮಾಡಿಕೊಂಡು ಬರಲಾಗಿದೆ.ಈ ಸಮಯದಲ್ಲಿ ಪ್ರಕೃತಿಕೂಡತೆನೆ ಬಿಡಲು ಸಜ್ಜಾಗಿರುತ್ತದೆ.ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ನೇಪಥ್ಯಕ್ಕೆ ಸರಿದಿರುವುದು ಖೇಧಕರ.ಮನೆಮನೆಯಲ್ಲಿಯೂ ಈ ಆಚರಣೆಯಿಂದ ಭೂಮಿಯ ಬಗ್ಗೆ ಗೌರವ ಮೂಡುವುದಲ್ಲದೇ ಹೆಣ್ಣನ್ನು ಭೂಮಿಗೆಆರೋಪಿಸುವ ಒಳಾರ್ಥದೊಂದಿಗೆ ಪ್ರತಿಯೊಬ್ಬರು ಪ್ರಕೃತಿಯನ್ನುಗೌರವಿಸುತ್ತಾನೆ. ಕೆಡ್ಡಸ ಕೇವಲ ಆಚರಣೆ ಮಾತ್ರವಲ್ಲ, ಇದುಅಧ್ಯಯನ ವಿಷಯವಾಗಿದೆ” ಎಂದು ಹೇಳಿದರು

“ಶಾಲೆಯಲ್ಲಿ ಇತಹಆಚರಣೆ ಮಾಡಿರುವಂತದ್ದು ನಿಜವಾಗಿಯೂ ತುಳುನಾಡಿನ ಪದ್ಧತಿ ಉಳಿಸಿದಂತೆ. ವಿದ್ಯಾರ್ಥಿಗಳು ಈ ಆಚರಣೆಯನ್ನು ಮನೆಯಲ್ಲಿಯೂ ಹಿರಿಯರೊಂದಿಗೆಸೇರಿ ಮಾಡುವುದರೊಂದಿಗೆ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಆಚರಣೆಗಳಿಂದ ಆಗಬೇಕು.”ಎಂದುಊರಿನ ಹಿರಿಯ ತಾಯಿಯಾದ  ಜಯಂತಿಯವರು ನುಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಕೆಡ್ಡಸದ ವಿಶೇಷತೆ ತಿಳಿಸುವ ಗೀತೆ ಹಾಡಿದರು.ತಬಲದಲ್ಲಿ೬ನೇ ತರಗತಿಯ ಸುಶಾನ್ ಹಾಗೂ ಹಾರ್ಮೋನಿಯಂನಲ್ಲಿ ೭ನೇ ತರಗತಿಯದುರ್ಗಾಶರಣ್‌ಸಹಕರಿಸಿದನು.  ಕೆಡ್ಡಸದ ವಿಶೇಷ ತಿನಿಸಾದ ನವವಿಧದ ಧಾನ್ಯಗಳಿಂದ ತಯಾರಿಸಿದ ನನ್ಯೆರಿಯನ್ನು ಅತಿಥಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚಲಾಯಿತು.
ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಜಯರಾಮ್‌ರೈ, ಊರಿನ ಹಿರಿಯರಾದ ಜಯಂತಿ ಹಾಗೂ ಸುಶೀಲ, ಮಾತೃಭಾರತೀಯ ಸದಸ್ಯರು ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನುವಿದ್ಯಾರ್ಥಿಗಳಾದವಾಸವಿ ಕೆ ಸಿ ನಿರೂಪಿಸಿ, ಭೂಷಣ್ ಸ್ವಾಗತಿಸಿ, ಚಂದ್ರಕಲಾ ವಂದಿಸಿದರು.

By Suddi9

Leave a Reply

Your email address will not be published. Required fields are marked *