ಬಂಟ್ವಾಳ:ಇಲ್ಲಿನ ಮಣಿನಾಲ್ಕೂರು ಎಂಬಲ್ಲಿ ಅಡಿಕೆ ವ್ಯಾಪಾರಿ ಖಾದರ್ ಎಂಬವರ ಮನೆಯೊಳಗೆ ಶನಿವಾರ ರಾತ್ರಿ ನಡೆದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಖಾದರ್ ಅವರು ಎಂದಿನಂತೆ ಪತಿ ಸಹಿತ ಮನೆಯ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದು, ಇಬ್ಬರು ಮಕ್ಕಳು ಬೇರೆ ಕೊಠಡಿಯಲ್ಲಿದ್ದರು.

ಆದರೆ ದಂಪತಿ ಮಲಗಿದ್ದ ಕೊಠಡಿ ಕಪಾಟಿನಲ್ಲಿದ್ದ ಒಟ್ಟು ೨೨ಪವನ್ ಚಿನ್ನಾಭರಣ ಮತ್ತು ಕಾಲಿನ ಎರಡು ಬೆಳ್ಳಿ ಚೈನ್ ಕಳವಾಗಿರುವುದು ಭಾನುವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಇವರ ಮನೆಯಲ್ಲಿ ಸಿಸಿ ಕ್ಯಾಮೆರಾ ಇದ್ದರೂ ಅದನ್ನು ಶನಿವಾರ ಮಧ್ಯಾಹ್ನವೇ ಬಂದ್ ಮಾಡಲಾಗಿದ್ದು, ಕಪಾಟಿನಲ್ಲಿದ್ದ ರೂ ೧.೫೦ಲಕ್ಷ ಮೊತ್ತದ ನಗದು ಅಲ್ಲೇ ಇದ್ದದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಎಸೈ ಪ್ರಸನ್ನ ಎಂ.ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *