ಲಾಹೋರ್ : ಭಾರತದೊಂದಿಗೆ ಯುದ್ಧ ಮಾಡಿದರೆ ಪರಿಣಾಮ ಏನೆಂದು ಮುಷರಪ್ ಇನ್ನೂ ಬುದ್ಧಿ ಕಲಿತಂತೆ ಕಾಣುವುದಿಲ್ಲ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪವರ್ೆಜ್ ಮುಷರಫ್ ಮತ್ತೆ ಭಾರತವನ್ನ ಕೆಣಕಿದ್ದು ಭಾರತದೊಂದಿಗೆ ಕಾಲ್ಕೆರೆದು ಯುದ್ಧಕ್ಕೆ ಅಣಿಯಾಗಿದ್ದರೆ.

ಕಾಶ್ಮೀರ ಗಡಿಯಲ್ಲಿ ಪ್ರಚೋದನಾತ್ಮಕ ಹಿಂಸಾಚಾರವನ್ನ ತಡೆಯಲು ಪಾಕ್ ಶಕ್ತವಾಗಿದೆ. ಕಾಶ್ಮೀರದಲ್ಲಿ ಲಕ್ಷಾಂತರ ಪಾಕ್ ಪಡೆಗಳು ಹೋರಾಟಕ್ಕೆ ಸಜ್ಜಾಗಿವೆ ಎನ್ನುವ ಮೂಲಕ ಮತ್ತೊಮ್ಮೆ ಯುದ್ಧದ ಎಚ್ಚರಿಕೆ ನೀಡಿದ್ದಾರೆ. ಪದೇ ಪದೇ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸುತ್ತಾ ಇದ್ದರೂ ಮುಷರಪ್ ಮಾತ್ರ ಭಾರತದತ್ತಲೇ ಬೊಟ್ಟು ಮಾಡಿದ್ದಾರೆ. ಕಳೆದ ವಾರ ಭಾರತದೊಂದಿಗೆ ಯುದ್ಧಕ್ಕೆ ಇಳಿದಿದ್ದ ಪಾಕ್ ಪಡೆಯನ್ನು ಭಾರತದ ಪಡೆ ಧೂಳಿಪಡೆ ಮಾಡಿದ್ದರೂ ಇನ್ನೂ ಮುಷರಪ್ಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ.
