ಇಎಸ್ಪಿಎನ್ ತಲೆಮಾರಿನ ಕ್ರಿಕೆಟಿಗರು ಪಟ್ಟಿಯಲ್ಲಿ ಸಚಿನ್, ಸೆಹ್ವಾಗ್
ದೆಹಲಿ: ಕ್ರೀಡಾ ವಾಹಿನಿ ಇಎಸ್ಪಿಎನ್ ತನ್ನ ಇಪ್ಪತ್ತನೇ ವಷರ್ಾಚರಣೆಯ ಸಮಾರಂಭವನ್ನು ಹಮ್ಮಿಕೊಂಡಿದ್ದು ಈ ವೇಳೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಕ್ರಿಕೆಟ್ನಲ್ಲಿ ಮಿಂಚಿದ ಇಪ್ಪತ್ತು ಆಟಗಾರರಿಗೆ ತಲೆಮಾರಿನ ಕ್ರಿಕೆಟರ್ ‘ಕ್ರಿಕೆಟರ್ ಆಫ್ ದ ಜನರೇಶನ್’ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ. ಈ ಪಟ್ಟಿಯಲ್ಲಿ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಸ್ಫೋಟಕ ಬ್ಯಾಟ್ಸ್ಮ್ಯಾನ್ ವಿರೇಂದ್ರ ಸೆಹ್ವಾಗ್ ಹೆಸರು ಕೂಡಾ ಸೇರಿದೆ.
ವಿಶ್ವದ ಅಗ್ರಮಾನ್ಯ ಮಾಜಿ ಮತ್ತು ಹಾಲಿ ಆಟಗಾರರ ಆಯ್ಕೆ ಸಮಿತಿ ಅಂತಿಮ ಇಪ್ಪತ್ತು ಆಟಗಾರರ ಹೆಸರನ್ನು ಸೂಚಿಸಲಿದೆ. ವಿಂಡೀಸ್ನ ಬ್ರಿಯನ್ ಲಾರ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್, ಆಸ್ಟ್ರೇಲಿಯಾದ ಶೇನ್ ವಾನರ್್ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಲೀಸ್ ಈ ಪಟ್ಟಿಯಲ್ಲಿರುವ ಇತರ ಕೆಲವು ಆಟಗಾರರಾಗಿದ್ದಾರೆ. ಈ ಪ್ರಶಸ್ತಿಯ ಜೊತೆಗೆ ಕ್ರಿಕೆಟ್ಗೆ ಮಹತ್ತರ ಕೊಡುಗೆ ನೀಡಿರುವ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ‘ಕಾಂಟ್ರಿಬ್ಯೂಶನ್ ಟು ಕ್ರಿಕೆಟ್’ ಪ್ರಶಸ್ತಿಯನ್ನೂ ನೀಡಲು ಉದ್ದೇಶಿಸಲಾಗಿದ್ದು, ಪಿಚ್ ಕ್ಯೂರೇಟರ್ನಿಂದ ಹಿಡಿದು ಅಂಪೈರ್, ಪಂದ್ಯ ಸಂಘಟಕರು ಹಾಗೂ ಕ್ರಿಕೆಟ್ಗೆ ಯಾವ ವಿಧದಲ್ಲಾದರೂ ಕಾಣಿಕೆ ನೀಡಿರುವ ಎಲ್ಲರನ್ನೂ ಈ ಪ್ರಶಸ್ತಿ ಒಳಗೊಳ್ಳಲಿದೆ. ಈ ಪ್ರಶಸ್ತಿಗೆ ಅರ್ಹರನ್ನು ಭಾರತದ ‘ದಿ ಗ್ರೇಟ್ ವಾಲ್’ ಎಂದೇ ಖ್ಯಾತನಾಗಿರುವ ರಾಹುಲ್ ದ್ರಾವಿಡ್ ಆಯ್ಕೆ ಮಾಡಲಿದ್ದಾರೆ.

111p

By suddi9

Leave a Reply

Your email address will not be published. Required fields are marked *