ಬೆಂಗಳೂರು: ಐಪಿಎಲ್ ಬಿಡ್ಡಿಂಗ್`ನ ದಿನೇಶ್ಕಾರ್ತಿಕ್ ಹಾಗೂ ಮುರಳಿ ವಿಜಯ್ಮೇ ಲ್ನೋಟಕ್ಕೆ ಇವರಿಬ್ಬರು ಸ್ನೇಹಿತರು. ಹೆಣ್ಣಿಗಾಗಿ ಇವರಿಬ್ಬರು ದುಷ್ಮನ್`ಗಳಾಗಿದ್ದಾರೆ. ದಿನೇಶ್ ಕಾರ್ತಿಕ್ ಮಾಜಿ ಪತ್ನಿ ಈಗ ಮುರಳಿ ಪ್ರೇಯಸಿ.

2007ರಲ್ಲಿ ಕಾರ್ತಿಕ್-ನಿಖಿತಾ ಪ್ರೀತಿಸಿ ಮದ್ವೆಯಾಗಿದ್ದರು. ಇಬ್ಬರ ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಆದರೆ, ಕಾರ್ತಿಕ್ ದಾಂಪತ್ಯದಲ್ಲಿ ಒಬ್ಬ ವಿಲನ್ಎಂಟ್ರಿ ಕೊಟ್ಟ. ಆತ ಭಾರತ ಟೆಸ್ಟ್ ತಂಡದ ಓಪನಿಂಗ್ ಬ್ಯಾಟ್ಸ್ಮನ್ಮುರಳಿ ವಿಜಯ್. ಮುರಳಿ, ಕಾರ್ತಿಕ್ ಮತ್ತು ನಿಖಿತಾ ಮೂವರೂ ಒಂದು ಕಾಲದಲ್ಲಿ ಸ್ನೇಹಿತರು. ಕಾರ್ತಿಕ್ ಮದ್ವೆಯಾದ ಮೇಲೂ ನಿಖಿತಾ ಜೊತೆ ವಿಜಯ್ಗೆ ಸಂಬಂಧ ಇತ್ತು ಎನ್ನಲಾಗಿದೆ. ನಿಖಿತಾ ಮಗುವಿಗೆ ನಿಜವಾದ ಅಪ್ಪ ವಿಜಯ್ ಎಂಬ ಶಂಕೆ ಮೇರೆಗೆ ನಿಖಿತಾಗೆ ಡಿವೋರ್ಸ್ ಕೊಟ್ಟು, ದಾಂಪತ್ಯದ ತಾಪತ್ರಯದಿಂದ ಕಾರ್ತಿಕ್ ಹೊರಬಂದರು.
ನಿಖಿತಾಗೆ ಡಿವೋರ್ಸ್ ನೀಡಿ ಕಾರ್ತಿಕ್`ಗೆ ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಜೊತೆಯಾದರು. ಫಿಟ್ನೆಸ್ ಜಿಮ್ನಲ್ಲಿ ಮುಖಾಮುಖಿಯಾದ ಇವರಿಬ್ಬರಿಗೆ ಮೊದಲ ನೋಟದಲ್ಲೇ ಲವ್ ಆಯ್ತಂತೆ. ಇತ್ತೀಚೆಗೆ ನಿಶ್ಚಿತಾರ್ಥವೂ ನಡೆದಿದೆ. ಇತ್ತ ನಿಖಿತಾಳನ್ನ ಮದ್ವೆಯಾಗಲು ಹಿಂದೂಮುಂದು ನೋಡುತ್ತಿರುವ ವಿಜಯ್, ಅವಳನ್ನ ಒಂದು ಅಪಾರ್ಟ್`ಮೆಂಟ್`ನಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ.
ಐಪಿಎಲ್`ನಲ್ಲಿ ವಿಜಯ್ ಮತ್ತು ಕಾರ್ತಿಕ್ ಇಬ್ಬರೂ ಡೆಲ್ಲಿ ಡೇರ್ಡೆವಿಲ್ಸ್ ಪರ ಆಡುತ್ತಾರೆ. ಒಬ್ಬರನ್ನ ಕಂಡರೆ ಒಬ್ಬರಿಗೆ ಆಗಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರೀಸಿನಲ್ಲಿ ಮಾತಾಡಿಕೊಂಡು ಜೊತೆಯಾಗಿ ಬ್ಯಾಟಿಂಗ್ ಮಾಡ್ತಾರಾ..? ಒಂದು ಪಕ್ಷ ಕಾರ್ತಿಕ್ ಕ್ಯಾಪ್ಟನ್ ಆದರೆ ಅವರ ಅಡಿಯಲ್ಲಿ ವಿಜಯ್ ಹೇಗೆ ಆಡ್ತಾರೆ..? ಕಾರ್ತಿಕ್-ವಿಜಯ್ ಅವರ ಖಾಸಗಿ ವಿಷಯ ಡೆಲ್ಲಿ ತಂಡದ ಮೇಲೆ ಪರಿಣಾಮ ಬೀಳದಿರಲಿ.

