ಕೈಕಂಬ:ಗುರುಪುರ ಕೈಕಂಬದ ಪೊಂಪೈ ಮಾತೆಯ ಚರ್ಚ್ ನ ಶತಮಾನೋತ್ಸವ ಕಾರ್ಯಕ್ರಮ ಕ್ಕೆ ನ.೪ರಂದು ಬುಧವಾರ ಚಾಲನೆ ನೀಡಲಾಯಿತು.ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೋ ಅವರು ಹಬ್ಬದ ಬಲಿಪೂಜೆಯ ನೇತೃತ್ವ ವಹಿಸಿದ್ದರು. ಬಲಿಪೂಜೆಯಲ್ಲಿ ಪೊಂಪೈ ಚರ್ಚ್ನ ಧರ್ಮಗುರು ಫಾ. ಆಂಟನಿ ಲೋಬೋ , ಪೇಜಾವರ ವಲಯದ ಧರ್ಮಗುರುಗಳಾದ ಫಾ.ಮರ್ಸೆಲ್ ಸಲ್ದಾನ, ಪೊಂಪೈ ಕಾನ್ವೆಂಟಿನ ಭಗಿನಿಯರು ಹಾಗೂ ರೋಸಾಮಿಸ್ತಿಕಾ ಕಾನ್ವೆಂಟಿನ ಭಗಿನಿಯರು ,ಸ್ನೇಹ ಸದನದ ಧರ್ಮಗುರುಗಳು ಹಾಗೂ ಜೀವದಾನ ಸಂಸ್ಥೆಯ ಭಗಿನಿಯರ್ , ಸುತ್ತಮುತ್ತಲಿನ ಧರ್ಮಗುರುಗಳು ಬೇರೆ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಧರ್ಮಗುರುಗಳು ಭಾಗವಹಿಸಿದ್ದರು.
ಮತ್ತು ಪೊಂಪೈ ದೇವಾಲಯದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಈ ಬಳಿಕ ನಡೆದ ಕಾರ್ಯಕ್ರಮ ದಲ್ಲಿ ಶತಮಾನೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ನಾನಾ ಯೋಜನೆಗಳ ಕುರಿತು ವಿವರಣೆ ನೀಡಿದರು. ಈ ಸಂದರ್ಭ ಚರ್ಚ್ನ ಪಾಲನಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಶತಮಾನೋತ್ಸವ ಸಂದರ್ಭದಲ್ಲಿ ಸಭಾಭವನ ನಿರ್ಮಾಣ, ಗಂಟೆ ಗೋಪುರ ಸೇರಿದಂತೆ ಹತ್ತು ಹಲವು ಕಾಮಗಾರಿಗಳಿಗೆ ಚಾಲನೆ ಸಿಗಲಿದ್ದು, ಶತಮಾನೋತ್ಸವ ಸಮಾರೋಪ ನ.೭,೨೦೨೧ರಂದು ನಡೆಯಲಿದೆ.







