ಕಾರ್ಕಳ:ಕೊರೊನಾ ಸೊಂಕು ದ್ರಡಪಟ್ಟ ವ್ಯಕ್ತಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಕೊಂಡ ಘಟನೆ ಶುಕ್ರವಾರ ನಡೆದಿದೆ. ಕಾರ್ಕಳ ಮಾರ್ಕೆಟ್ ರಸ್ತೆಯ ರಾಧಿಕಾ ಟಾಕೀಸ್ ಬಳಿಯಲ್ಲಿ ವಾಸವಾಗಿದ್ದ ಪ್ರಸನ್ನ (46) ಎಂಬವರು ಎಂದು ತಿಳಿದು ಬಂದಿದೆ. ವೃತ್ತಿಯಲ್ಲಿ ವೀಡಿಯೋಗ್ರಾಫರ್ ಆಗಿ ಹಲವು ವರ್ಷಗಳಿಂದ ಕಾರ್ಕಾಳ ಮಾರ್ಕೆಟ್ ರಸ್ತೆಯ ಪಕ್ಕದಲ್ಲಿ ವಾಸವಿದ್ದ ಅವರು ಅವಿವಾಹಿತರಾಗಿದ್ದು ಒಬ್ಬಂಟಿಯಾಗಿ ವಾಸವಾಗಿದ್ದರು. ಕಳೆದ ಕೆಲವು ದಿನಗಳಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಗ್ಯ ತಪಾಸಣೆ ಮಾದಿದ್ದರು. ಅವರಿಗೆ ಕೊರೊನಾ ಸೋಂಕು ದೃಡಪಟ್ಟಿದೆ ಎಂದು ಗೊತ್ತಾದ ಕೂಡಲೇ ಆಶಾಕರ್ತೆಯರು ಮನೆಗೆ ಬಂದು ಔಷದ ನೀಡಿ ಮನೆಯಲ್ಲೆ ಇರಲು ಸೂಚನೆ ನೀಡಿದ್ದರು.ತೀವೃವಾಗಿ ಜ್ವರ ಕಣಿಸಿಕೊಂಡ ಅವರು ಶುಕ್ರವಾರ ರಾತ್ರಿ ಮನನೊಂದು ಬಾವಿಗೆ ಹಾರಿ ಖೃತ್ಯ ಎಸಗಿದ್ದಾರೆ. ಕಾರ್ಕಳ ನಗರ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.