ಅಜೆಕಾರು: ಹಿರಿಯರನ್ನು ಗೌರವಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ, ನಮ್ಮ ಪ್ರಗತಿಗೆ ಅವರ ಮಾರ್ಗದರ್ಶನ ಸದಾ ಬೇಕು ಎಂದು ಉದ್ಯಮಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ಅವರು ಹೇಳಿದರು.ಅವರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ಕನ್ನಡ ಸಾಹಿತ್ಯ ಪರಿಷತ್ತು ಅಜೆಕಾರು ಹೋಬಳಿ ಮತ್ತು ಆದಿಗ್ರಾಮೋತ್ಸವ ಸಮಿತಿಯ ಸಹಯೋಗದೊಂದಿಗೆ ಕಡ್ತಲ ಜೈನರಬೆಟ್ಟಿನಲ್ಲಿ ಆಯೋಜಿಸಿದ್ದ ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದಲ್ಲಿ ವಿಶ್ರಾಂತ ಉಪನ್ಯಾಸಕ, ಶಿಕ್ಷಣ ಪರಿವೀಕ್ಷಕ ಅಡಂದಾಲು ಕರುಣಾಕರ ಹೆಗ್ಡೆ ಅವರನ್ನು ಗೌರವಿಸಿ ಮಾತನಾಡುತ್ತಿದ್ದರು.karunakar hegde honoured 1

ಪತ್ನಿ ಶ್ರೀಮತಿ ವತ್ಸಲಾ ಕೆ.ಹೆಗ್ಡೆ ಅವರನ್ನು ಗೌರವಿಸಲಾಯಿತು.ತನ್ನ ಬದುಕನ್ನು ಶಿಕ್ಷಣ ಕ್ಷೇತ್ರದ ಮತ್ತು ಊರಿನ ಅಭಿವೃದ್ಧಿಗಾಗಿಯೇ ಮೀಸಲಿಟ್ಟು, ನಿವೃತ್ತಿಯ ಬಳಿಕ ಪ್ರಗತಿಪರ ಕೃಷಿಕರಾಗಿ ತೊಡಗಿಸಿಕೊಂಡಿರುವ ಹೆಗಡೆಯವರದ್ದು ಸಾರ್ಥಕ ಬದುಕು ಎಂದು ನಿವೃತ್ತ ಅಂಚೆ ಪಾಲಕ ಕೆ.ಮೋಹನದಾಸ ನಾಯಕ ಹೇಳಿದರು.ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು ಅವರು ಅಧ್ಯಕ್ಷತೆ ವಹಿಸಿದ್ದರು.PSN_0166

ಉದ್ಯಮಿ, ಸಮಾಜ ಸೇವಾಸಕ್ತ ಗೋಪಿನಾಥ ಭಟ್ ಮುನಿಯಾಲು,. ಜನಪ್ರಿಯ ವೈದ್ಯ ಡಾ.ಪ್ರಮೋದ್ ಕಡ್ತಲ ಅತಿಥಿಗಳಾಗಿದ್ದರು. ಸಮಿತಿಯ ಸದಸ್ಯ ಸಂತೋಷ್ ಜೈನ್ ಎಣ್ಣೆಹೊಳೆ, ದಿವ್ಯ ಪಿ.ಹೆಗ್ಡೆ, ನಧೀಶ ಹೆಗ್ಡೆ, ನಿರೀಕ್ಷ ಹೆಗ್ಡೆ, ಸುನಿಧಿ ಎಸ್.ಎ, ಸುನಿಜ ಎಸ್.ಎ ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *