ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೊ ನಿವಾಸಿ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿವೃತ್ತ ಕಾರ್ಯದರ್ಶಿ ರಿಚಾರ್ಡ್ ಡಿ ಸೋಜ (೬೬) ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ರಾಗಿದ್ದಾರೆ.
ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರ. ,ಸಹೋದರಿಯರು ಸಹಿತ ಬಂಧು,ಬಳಗವನ್ನು ಅಗಲಿದ್ದಾರೆ. ಮೃತರು ಸೈಂಟ್ ವಿನ್ಸೆಂಟ್ ಪೌಲ್ ಸಭಾ ಇದರ ಲೊರಟ್ಟೊ ಚರ್ಚ್ ವ್ಯಾಪ್ತಿಯ ಅಧ್ಯಕ್ಷ ರಾಗಿ ೪೦ ವರ್ಷ ಹಾಗೂ ಲೊರಟ್ಟೊ ಚರ್ಚ್ ಪಾಲನ ಸಮಿತಿ ಸದಸ್ಯರಾಗಿ ನಲ್ವತ್ತು ವರ್ಷಗಳ ಸೇವೆ ಸಲ್ಲಿಸಿದ್ದಾರೆ.ಇವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಜಿಪಂ ಸದಸ್ಯ ರವೀಂದ್ರಕಂಬಳಿ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ಸಂತಾಪ ವ್ಯಕ್ತಪಡಿಸಿದ್ದಾರೆ.
