ಸುದ್ದಿ9 ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿವೇಶನರಹಿತರಿಗೆ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸಾಮೂಹಿಕ ಪ್ರತಿಭಟನೆ ಪ್ರದರ್ಶನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನಡೆಯಿತು.
ಸಿಪಿಎಂ ಮುಖಂಡ ಕೆ.ಆರ್. ಶ್ರೀಯನ್ ಮಾತನಾಡಿ, ನಿವೇಶನ ರಹಿತರಿಗೆ ಭೂಮಿ ಒದಗಿಸಿವುದು ಸರಕಾರದ ಜವಾಬ್ದಾರಿ. ಸರಕಾರ ಭೂಮಿ ಇಲ್ಲವಾದಲ್ಲಿ ಖಾಸಗಿ ಭೂಮಿ ಖರೀದಿಸಿ ಬಡವರಿಗೆ ನಿವೇಶನ ಒದಗಿಸಬೇಕು ಎಂದರು.

ನಿವೇಶನರಹಿತರ ಹೋರಾಟ ಸಮಿತಿ ಸಂಚಾಲಕ ಕೆ.ಯಾದವ ಶೆಟ್ಟಿ, ಸಿಪಿಎಂ ನಾಯಕರಾದ ವಸಂತ ಆಚಾರಿ, ಬಿ.ಎಂ.ಭಟ್, ಕಾಪರ್ೊರೇಟರ್ ದಯಾನಂದ ಶೆಟ್ಟಿ, ಯು.ಬಿ.ಲೋಕಯ ಮತ್ತಿತರರು ಮಾತನಾಡಿದರು.
ಸಿಪಿಎಂ ನಾಯಕ ಜೆ.ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣಪ್ಪ ಸಾಲಿಯಾನ್ ವಂದಿಸಿದರು.
ಜಿಲ್ಲಾಧಿಕಾರಿ ಪರವಾಗಿ ತಹಸೀಲ್ದಾರ್ ಮೊಹನ್ ರಾವ್ ಮನವಿ ಹಾಗೂ ನಿವೇಶನರಹಿತರ ಅಜರ್ಿ ಸ್ವೀಕರಿಸಿದರು. ಪ್ರತಿಭಟನಾ ಸಭೆಗೆ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ನಿವೇಶನರಹಿತರು ಮೆರವಣಿಗೆ ನಡೆಸಿದರು.
